ಇತ್ತೀಚಿನ ಸುದ್ದಿ
ಮಲೆನಾಡಲ್ಲಿ ಮುಂದುವರಿದ ಗಾಳಿ-ಮಳೆ: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಇಳಿದ ಸರಕಾರಿ ಬಸ್
13/09/2022, 21:27
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಾಲಕನ ನಿಯಂತ್ರಣ ತಪ್ಪಿ ಸರಕಾರಿ ಬಸ್ ಚರಂಡಿಗಿಳಿದ ಘಟನೆ ಮೂಡಿಗೆರೆ ತಾಲೂಕಿನ ಗುತ್ತಿಹಳ್ಳಿಯಲ್ಲಿ ನಡೆದಿದೆ.
ರಸ್ತೆ ಬದಿಯ ದಿಣ್ಣೆಗೆ ಒರಗಿ ಬಸ್ ನಿಂತಿದೆ. ಬಸ್ ಪ್ರಯಾಣಿಕರು ಡ್ರೈವರ್ ಸೀಟಿನಿಂದ ಇಳಿದರು.
ಬಸ್ಸಿನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಗುತ್ತಿಹಳ್ಳಿಯಿಂದ ಬೆಟ್ಟಗೆರೆ ಮೂಲಕ ಮೂಡಿಗೆರೆಗೆ ಬಸ್ ಪ್ರಯಾಣಿಸುತ್ತಿತ್ತು.
ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.