ಇತ್ತೀಚಿನ ಸುದ್ದಿ
ಮಳೆಗಾಲ ಆರಂಭವಾಗಿ ತಿಂಗಳ ಬಳಿ ಚಾರ್ಮಾಡಿಗೆ ಭೇಟಿ ನೀಡಿದ ಲೋಕೋಪಯೋಗಿ ಕಾರ್ಯದರ್ಶಿ: ತ್ವರಿತ ಕಾಮಗಾರಿಗೆ ಸೂಚನೆ
29/06/2022, 10:45
ಮಂಗಳೂರು(reporterkarnataka.com):.ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಗೆ
ಲೋಕೋಪಯೋಗಿ ಇಲಾಖೆ ರಾಜ್ಯ ಕಾರ್ಯದರ್ಶಿ ಕೃಷ್ಣ ರೆಡ್ಡಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ವರ್ಷಗಳ ಹಿಂದೆ ಭೂಕುಸಿತ, ಕಣಿವೆ ಭಾಗದಲ್ಲಿ ಕುಸಿತ ಹಾಗೂ ಮಳೆ ಗಾಳಿಗೆ ರಸ್ತೆ ಹಾಗೂ ತಡೆಗೋಡೆಗಳು ಸಂಪೂರ್ಣ ಹಾನಿಯಾಗಿದ್ದವು. ಈಗಾಲೇ ರಸ್ತೆ ಕೆಲಸ ತಾತ್ಕಾಲಿಕ ಮುಗಿದಿದ್ದು, ರಸ್ತೆ ಎರಡು ಬದಿ ಕೆಲವು ಕಡೆ ತಡೆ ಗೋಡೆ ಕಾಮಗಾರಿ ನಡೆಯುತ್ತಿದ್ದು,
ಆದಷ್ಟು ಬೇಗಾ ನಡೆಯುತ್ತಿರುವ ಕಾಮಗಾರಿ ಮುಗಿಸುವಂತೆ ಹಾಗೂ ಮಳೆಗಾಲದಲ್ಲಿ ಯಾವುದೇ ತೊಂದರೆ ಯಾಗದಂತೆ ಚಾರ್ಮಾಡಿ ಘಾಟ್ ನಲ್ಲಿ , ಸರಿಯಾಗಿ ನಿರ್ವಹಣೆ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಹಾಸನ ವಿಭಾಗ ಕಾರ್ಯ ನಿರ್ವಾಹಕ ಇಂಜಿನಿಯರ್ ಶ್ರೀಮತಿ ಅರ್ಚನಾ, ಬೇಲೂರು ಇಂಜಿನಿಯರ್ ಮುನಿರಾಜ್ ಹಾಗೂ ಸಹಾಯಕ ಇಂಜಿನಿಯರ್ ಸಂತೋಷ್ ಮುಂತಾದವರು ಇದ್ದರು.