3:01 PM Sunday5 - October 2025
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು

ಇತ್ತೀಚಿನ ಸುದ್ದಿ

ಮಲಬದ್ಧತೆ: ಇದು ಕಾಯಿಲೆಯೇ? ಇದಕ್ಕೆ ಏನು ಕಾರಣ? ಔಷಧ ಇಲ್ಲದೆ ನಿವಾರಣೆ ಹೇಗೆ ಸಾಧ್ಯ?

02/04/2022, 00:48

ವಯಸ್ಕರಲ್ಲಿ ಹಲವು ಜನರು ದೀರ್ಘಕಾಲದ ಮಲಬದ್ಧತೆ ಸಮಸ್ಯೆಯನ್ನು ಅನುಭವಿಸಿರುತ್ತಾರೆ. ಕರುಳಿನ ಚಲನೆಯಲ್ಲಿ ವ್ಯತ್ಯಯ ಉಂಟಾಗಿ ಮಲದ ವಿಸರ್ಜನೆ ಕಷ್ಟವಾಗಿ ಹಲವಾರು ದಿನ ಅಥವಾ ವಾರಗಳವರೆಗೆ ಉಳಿಯುವುದನ್ನು ಮಲಬದ್ಧತೆ ಎನ್ನುತ್ತಾರೆ. ಸಾಮಾನ್ಯವಾಗಿ ದಿನಂಪ್ರತಿ ವಿಸರ್ಜನೆ ಆದರೆ ಇನ್ನೂ ಕೆಲವರಿಗೆ ಎರಡು ಅಥವಾ ಮೂರು ದಿನಗಳಿಗೊಮ್ಮೆ ಮಲ ವಿಸರ್ಜನೆಯ ಅಭ್ಯಾಸವಿರುತ್ತದೆ. ಇದು ಯಾವುದೇ ರೀತಿಯ ಖಾಯಿಲೆಯಲ್ಲ. ಇದನ್ನು ಸ್ವಾಭಾವಿಕ ಎಂದೇ ಪರಿಗಣಿಸಬಹುದು.

ಮಲಬದ್ಧತೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ.

1. ಆಟೋನಿಕ್ : ಇದರಲ್ಲಿ ನಮ್ಮ ಕರುಳು ಹಾಗೂ

ಗುದ ನಾಳದ ಮಾಂಸಖಂಡಗಳ ಚಲನೆ ಕುಂಠಿತವಾಗಿ  ಮಲಬದ್ಧತೆ ಉಂಟಾಗುತ್ತದೆ.

2. ಸ್ಪಾಸ್ಟಿಕ್ : ಈ  ವಿಧದಲ್ಲಿ  ಕರುಳು ಸಂಕುಚಿತವಾಗಿ ವಿಸರ್ಜನೆ ಆಗಬೇಕಾದ ವಸ್ತು ಮುಂದಕ್ಕೆ ತಳ್ಳಲ್ಪಡದೆ ಇರುವುದರಿಂದ ಮಲಬದ್ಧತೆ ಉಂಟಾಗುತ್ತದೆ.

ಕಾರಣಗಳು ಏನು?:

    ●ಅನಿಯಮಿತ ಅವಧಿಯಲ್ಲಿ ಆಹಾರ ಸೇವನೆ

    ●ನೀರು ಕುಡಿಯದೇ ಇರುವುದು 

    ●ಆಹಾರದಲ್ಲಿ ನಾರಿನಾಂಶದ ಕೊರತೆ

    ●ಮಾನಸಿಕ ಒತ್ತಡ, ಖಿನ್ನತೆ

    ●IBS, ಥೈರೋಯ್ಡ್, ಹರ್ನಿಯ,  ಮೂಲವ್ಯಾಧಿಯಂತಹ ತೊಂದರೆಗಳಿಂದ

    ●ವ್ಯಾಯಾಮವಿಲ್ಲದೆ ಇರುವುದು

    ●Laxative ಗಳ ಮೇಲೆ ದೀರ್ಘಕಾಲದಿಂದ ಅವಲಂಬಿತರಾಗಿರುವುದು.

    ●ಕೆಲವೊಂದು ಔಷಧಗಳ ಬಳಕೆ

ಲಕ್ಷಣಗಳು :

    ●ತಲೆನೋವು

    ●ನಾಲಗೆ ಮೇಲ್ಪದರ ಬಿಳಿ ಹೊದಿಕೆ

    ●ಬಾಯಿಯ ದುರ್ವಾವಾಸನೆ

    ●ಹಸಿವಿಲ್ಲದಿರುವುದು

    ●ಹೊಟ್ಟೆ ಭಾರ

    ●ಈ ಎಲ್ಲಾ ಲಕ್ಷಣಗಳು ಮಲವಿಸರ್ಜನೆಯ ನಂತರ ವಾಸಿಯಾಗುವುದನ್ನು ಕಾಣಬಹುದು.

ಔಷಧ ರಹಿತ ಚಿಕಿತ್ಸೆ:

ನಾವು ತಿನ್ನುವ ಆಹಾರ ಮಲಬದ್ಧತೆ ಉಂಟಾಗಲು  

ಪ್ರಮುಖ ಕಾರಣವಾಗಿದೆ. ಹಾಗಾಗಿ ನಮ್ಮ ದೈನಂದಿನ ಆಹಾರದಲ್ಲಿ ದವಸ ಧಾನ್ಯ , ಹಸಿರು ತರಕಾರಿ, ನುಗ್ಗೆ ಕಾಯಿ, ಬಸಳೆ ಸೊಪ್ಪು, ಹರಿವೆ, ಬೆಂಡೆ ಕಾಯಿಯಂತಹ ತರಕಾರಿಗಳನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ನಿವಾರಣೆ ಮಾತ್ರವಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ. 

ಅಗಸೆ ಬೀಜದಲ್ಲಿ  ನಾರಿನಾಂಶ ಹೆಚ್ಚಿರುವುದಲ್ಲದೆ ಒಮೆಗಾ 3 ಫ್ಯಾಟಿ ಆಸಿಡ್ ಅನ್ನು ಹೊಂದಿರುವುದರಿಂದ ಮಲಬದ್ಧತೆ ನಿವಾರಿಸುವುದಲ್ಲದೆ ಚರ್ಮದ ಆರೋಗ್ಯಕ್ಕೂ ಸಹಾಯಕಾರಿಯಾಗಿದೆ.

ಒಣ ದ್ರಾಕ್ಷಿ, ಪ್ರೂನ್ ಹಣ್ಣು, ಮೆಂತೆ ಕಾಳು, ಎಳ್ಳು,ಬಾರ್ಲಿಯು ಕೂಡ ಮಲಬದ್ಧತೆಗೆ ರಾಮಬಾಣವಾಗಿದೆ.

ಪ್ರತೀ ದಿನ 8-10 ಗ್ಲಾಸ್ ನೀರನ್ನು ಕುಡಿಯುವುದು ಅವಶ್ಯಕ.

ಬೆಳಗಿನ ಜಾವದಲ್ಲಿ ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುವುದು ಉತ್ತಮ.ತಂಬಾಕು, ಅಲ್ಕೋಹಾಲ್ ಸೇವನೆ ತ್ಯಜಿಸಿ.

ನಡಿಗೆ,ಹೊಟ್ಟೆಯ ಮಾಂಸಖಂಡಗಳ ವ್ಯಾಯಾಮ ನಿರಂತರವಾಗಿ ಮಾಡುವುದು ಸಹಾಯಕಾರಿಯಾಗಿದೆ.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು