ಇತ್ತೀಚಿನ ಸುದ್ದಿ
ದೆಹಲಿ ವಿಧಾನಸಭೆಯಲ್ಲಿ ಭಾರಿ ಭದ್ರತಾ ಲೋಪ: ಗೇಟ್ ಮುರಿದು ಒಳನುಗ್ಗಿದ ಕಾರು; ಸ್ಪೀಕರ್ ವಾಹನಕ್ಕೆ ಕಪ್ಪುಮಸಿ
06/04/2026, 19:29
ನವದೆಹಲಿ(reporterkarnataka.com): ದೇಶದ ರಾಜಧಾನಿಯ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ದೆಹಲಿ ವಿಧಾನಸಭೆಯ ಭದ್ರತಾ ವ್ಯವಸ್ಥೆಗೆ ಭಾರೀ ಹಾನಿಯಾಗಿರುವ ಘಟನೆ ನಡೆದಿದೆ.
ಸೋಮವಾರ ಅಪರಿಚಿತ ವಾಹನವೊಂದು ವಿಧಾನಸಭೆಯ ಮುಖ್ಯ ಗೇಟ್ಗೆ ಬಲವಾಗಿ ಡಿಕ್ಕಿ ಹೊಡೆದು, ಆವರಣದೊಳಗೆ ನುಗ್ಗಿ ಬಳಿಕ ಯಾರಿಗೂ ಸಿಗದಂತೆ ಪರಾರಿಯಾಗಿದೆ. ಇದರ ನಡುವೆ ಕಾರಿನಲ್ಲಿದ್ದ ಸಿಬ್ಬಂದಿ ವಿಧಾನಸಭೆಯ ಆವರಣದಲ್ಲಿದ್ದ ಸ್ಪೀಕರ್ ಕಾರಿಗೆ ಕಪ್ಪು ಮಸಿ ಬಳಿದಿರುವ ಘಟನೆ ನಡೆದಿದೆ. ಈ ಘಟನೆಯು ಆಡಳಿತ ಯಂತ್ರ ಮತ್ತು ಭದ್ರತಾ ಸಿಬ್ಬಂದಿಯಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.
ಸೋಮವಾರದಂದು ಅನಿರೀಕ್ಷಿತವಾಗಿ ಬಂದ ಕಾರೊಂದು ವಿಧಾನಸಭೆಯ ಮುಖ್ಯ ದ್ವಾರವನ್ನು ಭೇದಿಸಿಕೊಂಡು ಒಳಪ್ರವೇಶಿಸಿದೆ. ಗೇಟ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಭದ್ರತಾ ಸಿಬ್ಬಂದಿ ಮತ್ತು ವಿಧಾನಸಭೆಯ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರು ವಿಧಾನಸಭೆಯ ಆವರಣದೊಳಗೆ ಕೆಲಕಾಲ ಸಂಚರಿಸಿ, ನಂತರ ಯಾವುದೇ ಅಡೆತಡೆಯಿಲ್ಲದೆ ಅಲ್ಲಿಂದ ಹೊರಬಂದು ನಾಪತ್ತೆಯಾಗಿದೆ. ವಿಧಾನಸಭೆಯಂತಹ ಅತಿ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ದುಸ್ಸಾಹಸ ನಡೆದಿರುವುದು ಭದ್ರತಾ ಪ್ರೋಟೋಕಾಲ್ಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.












