ಇತ್ತೀಚಿನ ಸುದ್ದಿ
ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಹಣಕ್ಕೆ ಪೀಡಿಸುವ ನಾಲ್ವರ ಖತರ್ನಾಕ್ ಗ್ಯಾಂಗ್: ಒಂಟಿ ಮನೆ, ಮಹಿಳೆಯರೇ ಇವರ ಟಾರ್ಗೆಟ್!
05/01/2025, 20:30
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.Com
ಜಿಲ್ಲೆಯಲ್ಲಿ ಒಂದ ಹೊಸ ವರಸೆ ಶುರುವಾಗಿದೆ. ಒಂಟಿ ಮನೆ ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಬರಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಇಂತಹ ಘಟನೆ ನಡೆದಿದೆ.
ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಹಣಕ್ಕೆ ಪೀಡಿಸುವ ನಾಲ್ವರ ತಂಡ ಇದಾಗಿದೆ.
ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿ ಮನೆಗಳಿಗೆ ಈ ನಾಲ್ವರು ನುಗ್ಗುತ್ತಾರೆ. ಮನೆಯವರು ಬಾಗಿಲು ತೆಗೆಯೋವರೆಗೂ ಹೋಗಲ್ಲ… ಮನೆ ಹಿಂದೆ-ಮುಂದೆ ಎಲ್ಲಾ ಸುತ್ತಾಡುತ್ತಾರೆ. ಗೌಡ್ರೆ, ಅಮ್ಮ, ಅಮ್ಮಾವ್ರೆ, ಅವ್ವ, ಸರ್, ಮಾಲೀಕರೇ, ಅಪ್ಪಾಜಿ ಅಂತೆಲ್ಲಾ ಮನೆಯವರು ಹೊರಗೆ ಬರುವವರೆಗೂ ಕೂಗ್ತಾರೆ.
ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ರಮೇಶ್ ಗೌಡ ಅವರ ಮನೆಗೆ ಈ ನಾಲ್ವರ ಗ್ಯಾಂಗ್ ಬಂದಿದೆ. ಮನೆಯವರು ಬರೋವರೆಗೂ ಅವರ ಚಲನ-ವಲನ, ಹಾವಾಭಾವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜನ ಕಂಡ ಕೂಡಲೇ ತಲೆಗೆ ಗೌನ್ ಹಾಕಿ ನಿಮ್ಮ ಮನೆಗೆ ಮೈಲಾರಲಿಂಗ ಬಂದಾನಾ ಅಂತ ಹೇಳುತ್ತಾರೆ.
ಮನೆಯವ್ರು ಬಾಗಿಲು ತೆಗೆದ ಕೂಡಲೇ ಸೀದಾ ಒಳಗೆ ಹೋಗ್ತಾರೆ. ಮಹಿಳೆಯರಿಗೆ ದೇವರು ಅಂತ ಹೆದರಿಸಿ ಹಣ ಪಡೆಯುತ್ತಾರೆ. ಮುಂದೆ ಈ ತಂಡದಿಂದ ಏನಾದರೂ ಅವಘಡ ಸಂಭವಿಸಬಹುದೆಂದು ಮಲೆನಾಡಿಗರು ಎಚ್ಚರಗೊಂಡಿದ್ದಾರೆ. ಇವರು ಎಲ್ಲೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.