9:37 AM Sunday14 - September 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ

ಇತ್ತೀಚಿನ ಸುದ್ದಿ

ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌: ಬೆಂಗಳೂರಿನ ತಂತ್ರಜ್ಞಾನ ಕೇಂದ್ರದಲ್ಲಿ ಹೊಸ ಕಚೇರಿ

12/05/2022, 13:20

ಬೆಂಗಳೂರು(reporterkarnataka.com): ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ (ಎಂಇಎಂಎಲ್) ವಿಭಾಗಗಳಾದ – ಲಾಸ್ಟ್ ಮೈಲ್ ಮೊಬಿಲಿಟಿ (ಎಲ್‌ಎಂಎಂ) ಮತ್ತು ಇವಿ ಟೆಕ್ನಾಲಜಿ ಸೆಂಟರ್ (ಇವಿಟಿಇಸಿ) ಇವು ವೆಲಂಕಣಿ ಟೆಕ್‌ಪಾರ್ಕ್ 43, ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, 1ನೇ ಹಂತ, ಬೆಂಗಳೂರು ಈ ವಿಳಾಸದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 

ಹೊಸ ಕಚೇರಿಯು ಎಂಇಎಂಎಲ್‌ನ ವಿಸ್ತರಣೆ ಕಾರ್ಯತಂತ್ರಕ್ಕೆ ಅನುಗುಣವಾಗಿದೆ ಹಾಗೂ ಇಲ್ಲಿನ ಉದ್ಯೋಗಿಗಳಿಗೆ ಅತ್ಯಾಕರ್ಷಕ ಕಾರ್ಯಕ್ಷೇತ್ರವನ್ನು ಸೃಷ್ಟಿಸಲಾಗಿದೆ. ಬೆಂಗಳೂರಿನ ಈ ಹೊಸ ಕಚೇರಿಯು 500ಕ್ಕೂ ಹೆಚ್ಚು ಉದ್ಯೋಗಿಗಳ ಆಸನ ಸಾಮರ್ಥ್ಯ ಹೊಂದಿದೆ ಮತ್ತು ಇವಿಟಿಇಸಿಯ ಸಂಪೂರ್ಣ ಕಾರ್ಯಪಡೆ ಮತ್ತು ಎಲ್‌ಎಂಎಂನ ಕೆಲವು ಕಾರ್ಯಗಳನ್ನು ಹೊಂದಿದೆ. ಏಪ್ರಿಲ್ 1ರಿಂದ ಉದ್ಯೋಗಿಗಳು ಕೋವಿಡ್ -19ರ ಅಗತ್ಯ ನಿಯಮಗಳನ್ನು ಅನುಸರಿಸುವ ಮೂಲಕ ಕಚೇರಿಯಿಂದ ಕೆಲಸವನ್ನು ಪ್ರಾರಂಭಿಸಿದ್ದಾರೆ.

ವೆಲಂಕಣಿ ಆವರಣವು ವಿಶಾಲವಾಗಿದ್ದು, ಪರಿಸರ ಸ್ನೇಹಿಯಾಗಿರುವ ನವೀಕೃತ ಮೂಲಸೌಕರ್ಯಗಳನ್ನು ಹೊಂದಿದೆ ಮತ್ತು ಸ್ವಾವಲಂಬಿ ಕ್ಯಾಂಪಸ್, ಕಾರ್ಯತಂತ್ರವಾಗಿ ನಗರದ ತಂತ್ರಜ್ಞಾನ ಕೇಂದ್ರದಲ್ಲಿದೆ. ಈ ಹೊಸ ಕಚೇರಿಯು ಉದ್ಯೋಗಿಗಳ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅತ್ಯಾಧುನಿಕ ಇವಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ, ನಮ್ಮ ಪ್ರಯತ್ನಗಳನ್ನು ಚುರುಕುಗೊಳಿಸಿ ಎಲೆಕ್ಟ್ರಿಕ್ 3-ಚಕ್ರ ವಾಹನ ವಿಭಾಗದಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರಪಡಿಸುವಲ್ಲಿ ಸಹಕಾರಿಯಾಗಲಿದೆ.

ಇವಿಟಿಇಸಿ ಆಟೋಮೋಟಿವ್ ಟೆಕ್ನಾಲಜೀಸ್ ಮುಖ್ಯಸ್ಥ ಪಂಕಜ್ ಸೋನಾಲ್ಕರ್ ಅವರು, “ನೌಕರರು ಹೊಸ ಕಚೇರಿಯ ಬಗ್ಗೆ ಉತ್ಸುಕರಾಗಿದ್ದಾರೆ. ಭವಿಷ್ಯಕ್ಕಾಗಿ ನಾವು ಇವಿ ತಂತ್ರಜ್ಞಾನಗಳನ್ನು ಇನ್ನಷ್ಟು ಉತ್ಸಾಹದಿಂದ ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತೇವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ’ ಎಂದಿದ್ದಾರೆ.

ಎಂಇಎಂಎಲ್‌ನ ಸಿಇಒ ಸುಮನ್ ಮಿಶ್ರಾ ಅವರು, “ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸುವಲ್ಲಿ ಕೆಲಸದ ಸ್ಥಳ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ಹಸಿರು ಕ್ಯಾಂಪಸ್ ಈಗ ಕಚೇರಿಯಿಂದ ಕೆಲಸದ ಸ್ವರೂಪಕ್ಕೆ ಮರಳುತ್ತಿರುವ ನಮ್ಮ ಉದ್ಯೋಗಿಗಳಲ್ಲಿ ಹೊಸ ಶಕ್ತಿ ತುಂಬುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಮುಂಬೈನ ಕಂಡಿವಲಿಯಲ್ಲಿ ಎಲ್‌ಎಂಎಂ ಸಂಪೂರ್ಣ ಕಾರ್ಯಕಾರಿ ಕಚೇರಿಯನ್ನು ಮುಂದುವರಿಸುತ್ತದೆ. ಇನ್ನೋವೇಶನ್ ಸೆಂಟರ್ ಮತ್ತು ಬೊಮ್ಮಸಂದ್ರ ಪ್ಲಾಂಟ್ ಸಿಬ್ಬಂದಿಗಳು ಬೆಂಗಳೂರಿನ ತಮ್ಮ ಸ್ಥಳಗಳಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು