ಇತ್ತೀಚಿನ ಸುದ್ದಿ
ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ: ತಾಲೂಕು ವೈದ್ಯಾಧಿಕಾರಿಗೆ ಸಂಬಂಧಿಕರಿಂದ ಧರ್ಮದೇಟು
20/09/2023, 19:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಡಿ ಗ್ರೂಪ್ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ
ಆರೋಪದ ಮೇಲೆ ತಾಲೂಕು ವೈದ್ಯಾಧಿಕಾರಿಗೆ ಹಿಗ್ಗಾಮುಗ್ಗಾ ಥಳಿತ ಘಟನೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಟಿಎಚ್ ಒ ಡಾ.ಎಲ್ಡೋಸ್ ಸ್ಥಳಿಯರಿಂದ ಧರ್ಮದೇಟು ತಿಂದ ವೈದ್ಯರಾಗಿದ್ದಾರೆ. ಸ್ಥಳೀಯರು ಮುಖ-ಮೂತಿ ನೋಡದೆ ವೈದ್ಯಾಧಿಕಾರಿಗೆ ಥಳಿಸಿದ್ದಾರೆ.
ಗ್ರೂಪ್ ಡಿ ಮಹಿಳಾ ಸಿಬ್ಬಂದಿಯನ್ನು ರೂಂನಲ್ಲಿ ಕೂಡಿಹಾಕಿದ್ದರು ಎಂದು ಆರೋಪಿಸಲಾಗಿದೆ. ಇದೀಗ
ತಾಲೂಕು ಆರೋಗ್ಯ ಅಧಿಕಾರಿ ಡಾ.ಎಲ್ಡೋಸ್ ವಿರುದ್ದ ದೂರು ದಾಖಲಾಗಿದೆ.
ಮಹಿಳೆಯ ಸಂಬಂಧಿಕರು ವೈದ್ಯರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಳೆಹೊನ್ನೂರು ಸರ್ಕಾರಿ ಅಸ್ಪತ್ರೆ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಈ ಹಿಂದೆ ನರ್ಸ್ ಕೆನ್ನೆಗೆ ಹೊಡೆದು ವೈದ್ಯ ಎಲ್ಡೋಸ್ ಅಮಾನತುಗೊಂಡಿದ್ದರು.
ಈ ಹಿಂದೆ ವೈದ್ಯರ ಮೇಲೆ ಹಲವು ಆರೋಪಗಳು ಕೇಳಿ ಬಂದಿತ್ತು. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.