11:57 AM Saturday20 - December 2025
ಬ್ರೇಕಿಂಗ್ ನ್ಯೂಸ್
ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ…

ಇತ್ತೀಚಿನ ಸುದ್ದಿ

ಮಾಹೆ ತಲುಪಿದ ಸ್ಪ್ರಿಂಗರ್ ನೇಚರ್ ಇಂಡಿಯಾ ಟೂರ್ 2024: ಮುಕ್ತ ಪ್ರವೇಶದ ಮೂಲಕ ಸಂಶೋಧನೆ, ಸಬಲೀಕರಣ ಕುರಿತು ಚರ್ಚಾ ಗೋಷ್ಠಿ

13/10/2024, 19:42

ಮಣಿಪಾಲ(reporterkarnataka.com): ಬಿಟ್ಸ್ ಪಿಲಾನಿ ಕೆ.ಕೆ. ಬಿರ್ಲಾ ಕ್ಯಾಂಪಸ್ ಮತ್ತು ಗೋವಾದ ನೌಕಾ ಯುದ್ಧ ಕಾಲೇಜಿನಲ್ಲಿ ತಂಗಿದ ಬಳಿಕ ಸ್ಪ್ರಿಂಗರ್ ನೇಚರ್ ಇಂಡಿಯಾ ರಿಸರ್ಚ್ ಟೂರ್ 2024 ತನ್ನ ಪಯಣವನ್ನು ಅದೇ ವೇಗದಲ್ಲಿ ಮುಂದುವರಿಸಿ, ಪ್ರತಿಷ್ಠಿತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಆವರಣವನ್ನು ತಲುಪಿತು.
ಈ ಕಾರ್ಯಕ್ರಮವು “ಮುಕ್ತ ಪ್ರವೇಶದ ಮೂಲಕ ಸಂಶೋಧನೆಯನ್ನು ಸಬಲೀಕರಣಗೊಳಿಸುವ” ಕುರಿತು ಆಕರ್ಷಕವಾದ ಚರ್ಚಾ ಗೋಷ್ಠಿಯನ್ನು ಒಳಗೊಂಡಿತ್ತು, ಜಾಗತಿಕ ಸಂಶೋಧನೆಯನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಮುಕ್ತ ಪ್ರವೇಶದ ಪರಿವರ್ತಕ ಶಕ್ತಿಯನ್ನು ಇದು ಅನ್ವೇಷಿಸಿತು.
ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ (ICSSR) ಉಪ ನಿರ್ದೇಶಕರಾದ ಡಾ. ಸಿಲಿ ರೌಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಾದ್ಯಂತ ಸಂಶೋಧಕರಿಗೆ ಮುಕ್ತ ಪ್ರವೇಶದ ಪ್ರಾಮುಖ್ಯ ಹೆಚ್ಚುತ್ತಿರುವುದು ಮತ್ತು ಅಂತರ್ಗತ ನಾವೀನ್ಯ ಮತ್ತು ಜ್ಞಾನ ಪ್ರಸಾರವನ್ನು ಪ್ರೇರೇಪಿಸುವ ಅದರ ಸಾಮರ್ಥ್ಯವನ್ನು ಮನದಟ್ಟು ಮಾಡಿಕೊಟ್ಟರು. ಚರ್ಚಾ ಗೋಷ್ಠಿಯನ್ನು ಸ್ಪ್ರಿಂಗರ್ ನೇಚರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟೇಶ್ ಸರ್ವಸಿದ್ದಿ ಅವರು ನಡೆಸಿಕೊಟ್ಟರು. ಏಮ್ಸ್ ಸಂಸ್ಥೆಯ CDER, ಓರಲ್ ಪೆಥಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೀಪಿಕಾ ಮಿಶ್ರಾ ಮತ್ತು ಮಾಹೆ ಸಂಶೋಧನಾ ನಿರ್ದೇಶಕರಾದ ಡಾ. ಸತೀಶ್ ರಾವ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಸ್ಪ್ರಿಂಗರ್ ನೇಚರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವೆಂಕಟೇಶ್ ಸರ್ವಸಿದ್ದಿ ಅವರು ಈ ಸಂಶೋಧನಾ ಪ್ರವಾಸದ ಮಹತ್ವವನ್ನು ವಿವರಿಸಿದರು: “ಸ್ಪ್ರಿಂಗರ್ ನೇಚರ್‌ನಲ್ಲಿ, ಸಂಶೋಧನೆಯನ್ನು ಮುಂದುವರಿಸಲು ಮತ್ತು ಭಾರತದಲ್ಲಿ ಶೈಕ್ಷಣಿಕ ಸಮುದಾಯವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ವೈಜ್ಞಾನಿಕ ಜ್ಞಾನವು ಎಲ್ಲರಿಗೂ ಲಭಿಸುವಂತಾಗಲು ಮುಕ್ತ ಪ್ರವೇಶವು ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಈ ಬದಲಾವಣೆಯನ್ನು ಮುನ್ನಡೆಸಲು ಮಾಹೆಯಂತಹ ಪ್ರಮುಖ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದೇ ನಮಗೆ ಒಂದು ಗೌರವವಾಗಿದೆ” ಎಂದರು.
ಮುಕ್ತ ಪ್ರವೇಶವನ್ನು ಅಳವಡಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಮಾಹೆ, ಸ್ಪ್ರಿಂಗರ್ ನೇಚರ್‌‍ ಜೊತೆಗೆ ಪರಿವರ್ತಕ ಒಪ್ಪಂದಕ್ಕೆ ಸಹಿ ಹಾಕಿದ ಭಾರತದ ಮೊದಲ ಸಂಸ್ಥೆಗಳಲ್ಲಿ ಒಂದಾಗಿದೆ. ಮಾಹೆ ಸಂಶೋಧಕರಿಗೆ ತಮ್ಮ ಕೃತಿಗಳನ್ನು 2,000ಕ್ಕೂ ಹೆಚ್ಚು ಸ್ಪ್ರಿಂಗರ್ ಹೈಬ್ರಿಡ್ ನಿಯತಕಾಲಿಕಗಳಲ್ಲಿ ಪ್ರಕಟಿಸಲು ಈ ಹೆಗ್ಗುರುತು ಒಪ್ಪಂದವು ಅನುವು ಮಾಡಿಕೊಡುತ್ತದೆ. ಅದಕ್ಕೆ ತಗಲುವ ಪೂರ್ಣ ಶುಲ್ಕವೂ ಇದರಲ್ಲೇ ಒಳಗೊಂಡಿರುತ್ತದೆ. ವೈಜ್ಞಾನಿಕ ಜ್ಞಾನದ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಈ ಒಪ್ಪಂದವು ಹೆಚ್ಚಿನ ಸಹಯೋಗ ಮತ್ತು ಗೋಚರತೆಯನ್ನು ಉತ್ತೇಜಿಸುತ್ತದೆ ಹಾಗೂ ಮಾಹೆಯಲ್ಲಿ ನಡೆಸಲಾದ ಸಂಶೋಧನೆಗಳನ್ನು ವಿಶ್ವಾದ್ಯಂತ ವಿದ್ವಾಂಸರು, ವೃತ್ತಿನಿರತರು ಮತ್ತು ಸಾರ್ವಜನಿಕರಿಗೆ ಮುಕ್ತವಾಗಿ ವೀಕ್ಷಿಸುವಂತೆ ಮಾಡುತ್ತದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ. ವೆಂಕಟೇಶ್ ಅವರು ಮಾತನಾಡಿ, “ಸ್ಪ್ರಿಂಗರ್ ನೇಚರ್ ಜೊತೆಗೆ ನಾವು ಸಹಿ ಹಾಕಿರುವ ಪರಿವರ್ತಕ ಒಪ್ಪಂದವು ನಮ್ಮ ಸಂಶೋಧಕರನ್ನು ಸಬಲೀಕರಣಗೊಳಿಸುವ ಮತ್ತು ಜಾಗತಿಕವಾಗಿ ಅವರ ಕೆಲಸದ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಮುಖ ಹೆಜ್ಜೆಯಾಗಿದೆ. ಈ ದಿನಗಳಲ್ಲಿ ಮುಕ್ತ ಪ್ರವೇಶವು ಐಷಾರಾಮಿಯಲ್ಲ. ಆದರೆ ಜಾಗತಿಕ ಪಾಂಡಿತ್ಯವನ್ನು ಮುನ್ನಡೆಸಲು ಅತ್ಯಗತ್ಯವಾಗಿದೆ. ಶೈಕ್ಷಣಿಕ ಪ್ರಕಟಣೆಯಲ್ಲಿ ಈ ಪ್ರಮುಖ ಬದಲಾವಣೆಯ ಭಾಗವಾಗಲು ನಾವು ಉತ್ಸುಕರಾಗಿದ್ದೇವೆ” ಎಂದರು.
ಸ್ಪ್ರಿಂಗರ್ ನೇಚರ್ ಇಂಡಿಯಾ ರಿಸರ್ಚ್ ಟೂರ್ 2024 ಮುಂದುವರೆದಂತೆ, ಮುಕ್ತ ಪ್ರವೇಶ ಮತ್ತು ಶೈಕ್ಷಣಿಕ ಸಹಯೋಗದ ಮೇಲಿನ ಗಮನವು ದೇಶದೆಲ್ಲೆಡೆಯ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧಕರೊಂದಿಗೆ ತೀವ್ರವಾಗಿ ಸ್ಪಂದಿಸುತ್ತದೆ, ವೈಜ್ಞಾನಿಕ ಪ್ರಕಟಣೆಯಲ್ಲಿ ಒಳಗೊಳ್ಳುವಿಕೆ ಮತ್ತು ನಾವೀನ್ಯದ ಪರಿಸರ ವ್ಯವಸ್ಥೆಯನ್ನು ಬೆಳೆಸುತ್ತದೆ.
ಇಂಡಿಯಾ ರಿಸರ್ಚ್ ಟೂರ್ 2024 ಮಣಿಪಾಲದಿಂದ ಹೊರಟು ಕೇರಳಕ್ಕೆ ಪಯಣಿಸಲಿದ್ದು, IIM-ಕೋಝಿಕೋಡ್ ಮತ್ತು ತಿರುವನಂತಪುರಂನ ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್ ಮುಂತಾದ ಸಂಸ್ಥೆಗಳಿಗೆ ಭೇಟಿ ನೀಡಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು