ಇತ್ತೀಚಿನ ಸುದ್ದಿ
ಮಹಾರಾಷ್ಟ್ರ: ಕರ್ನಾಟಕ ಬಸ್‌ಗೆ ಕಪ್ಪು ಮಸಿ; ಗಡಿ ಭಾಗದಲ್ಲಿ ಮತ್ತೆ ಪುಂಡಾಟಿಕೆ ಶುರು
26/11/2022, 16:42

ಔರಂಗಬಾದ್(reporterkarnataka.com): ಮಹಾರಾಷ್ಟ್ರದ ಔರಂಗಬಾದ ಜಿಲ್ಲೆಯ ದೌಂಡ್ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಮಸಿ ಬಳೆದು ಪುಂಡಾಟಿಕೆ ಮೆರೆದಿದ್ದಾರೆ.ನಿಪ್ಪಾಣಿ – ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ಗೆ ಅಖಿಲ ಭಾರತೀಯ ಮರಾಠಾ ಸಂಘದ ಕಾರ್ಯಕರ್ತರು ಮಸಿ ಬಳಿದಿದ್ದಾರೆ.
ಜತ್ತ ತಾಲೂಕಿನ 40 ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಠರಾವು ಹೊರಡಿಸಿದ್ದರು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಹಾರಾಷ್ಟ್ರ ನಮ್ಮ ಹಕ್ಕು ಯಾರಪ್ಪನದು ಅಲ್ಲಾ ಎಂದು ಘೋಷಣೆ ಕೂಗುತ್ತಾ ಬೆಳಗಾವಿ, ನಿಪ್ಪಾಣಿ, ಖಾನಾಪುರ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಘೋಷಣೆ ಹಾಕಿದ್ದಾರೆ.