8:59 PM Monday30 - March 2026
ಬ್ರೇಕಿಂಗ್ ನ್ಯೂಸ್
ಕೌಟುಂಬಿಕ ಕಲಹ: ಭದ್ರಾ ಬಲದಂಡೆ ನಾಲೆ ಬ್ರಿಡ್ಜ್ ನಿಂದ ಹಾರಿ ಸೂಪರ್ ವೈಸರ್… ಗ್ಯಾಸ್ ಸಿಲಿಂಡರ್ ಗೆ ರೆಗ್ಯುಲೇಟರಿ ಅಳವಡಿಸುವಾಗ ಏಕಾಏಕಿ ಸ್ಫೋಟ: ಮನೆ ಛಿದ್ರಛಿದ್ರ; 4… ಭಕ್ತ ಸಾಗರದ ಹರ್ಷೋದ್ಗಾರದೊಂದಿಗೆ ನಡೆದ ನಂಜನಗೂಡಿನ ದೊಡ್ಡ ಜಾತ್ರೆ: ಶ್ರೀ ಗೌತಮ ಪಂಚ… ನಿಯಂತ್ರಣ ತಪ್ಪಿದ ಸರಕಾರಿ ಬಸ್: ಮಡಿಕೇರಿ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ…

ಇತ್ತೀಚಿನ ಸುದ್ದಿ

ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಸಿಗೆ ಮಸಿ: ಗಡಿ ಭಾಗ ಅಥಣಿಯಲ್ಲಿ ವಿನೂತನ ಪ್ರತಿಭಟನೆ

28/11/2022, 20:23

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸುಗಳಿಗೆ ಕಪ್ಪು ಮಸಿ ಬಳಿದು ಕಲ್ಲು ಹೊಡೆದ ಮರಾಠಿ ಪುಂಡರ ಕೃತ್ಯ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಯಿತು. ಕರವೇ ಪ್ರವೀಣ ಶೆಟ್ಟಿ ಬಣದಿಂದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಚಾಲಕ ನಿರ್ವಾಹಕರಿಗೆ ಹಾರ ಹಾಕಿ ಕನ್ನಡ ಶಲ್ಯೆ ಕೊಟ್ಟು ಧ್ವಜವನ್ನು ಹಿಡಿಸಿ ಗುಲಾಬಿ ನೀಡುವ ಮೂಲಕ ಮಹಾರಾಷ್ಟ್ರ ಸಾರಿಗೆ ಸಿಬ್ಬಂದಿಗಳನ್ನು ಸನ್ಮಾನಿಸಿದರು.

ಅಥಣಿ ಪಟ್ಟಣದ ಹಲ್ಯಾಳ ಸರ್ಕಲ್ ಮತ್ತು ಅಂಬೇಡ್ಕರ್ ವೃತ್ತದಲ್ಲಿ ಮಹಾರಾಷ್ಟ್ರ ಸಾರಿಗೆ ಬಸ್ ತಡೆದ ಕರವೇ ಸದಸ್ಯರು ಮಹಾರಾಷ್ಟ್ರ ಸಿ ಎಮ್ ಎಕನಾಥ ಶಿಂಧೆ ಮತ್ತು ಎಮ್ ಇ ಎಸ್ ಹಾಗೂ ಶಿವಸೇನೆ ಪುಂಡರ ವಿರುದ್ದ ಧಿಕ್ಕಾರ ಕೂಗಿದರಲ್ಲದೆ ಜತ್ ಸೋಲಾಪುರ ಅಕ್ಕಲಕೋಟ ಲಾಥೂರ ಗಳನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಅಣ್ಣಾಸಾಬ ತೆಲಸಂಗ ಗಡಿ ಕ್ಯಾತೆ ತೆಗೆಯುವ ಮಹಾ ಪುಂಡರಿಗೆ ತಕ್ಕ ಪಾಠ ಕಲಿಸಲು ಕರ್ನಾಟಕದಲ್ಲಿ ಎಮ್ ಇ ಎಸ್ ಮತ್ತು ಶಿವಸೇನೆಯನ್ನು ನಿಷೇಧಿಸಬೇಕು. ಅಲ್ಲಿನ ಕನ್ನಡಿಗರ ಮೇಲೆ ಹಲ್ಲೆ ಮತ್ತು ಅವಮಾನ ಮಾಡಲಾಗುತ್ತಿದ್ದು ತಪ್ಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಸಾಹಿತಿ ದೀಪಕ ಶಿಂಧೇ ಮಾತನಾಡಿ, ಮಹಾರಾಷ್ಟ್ರದ ಜತ್,ಅಕ್ಕಲಕೋಟ,ಸೊಲ್ಲಾಪುರ, ಕೊಲ್ಲಾಪೂರ ಜಿಲ್ಲೆಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿರುವ ಹಳ್ಳಿಗಳನ್ನು ಕಡೆಗಣಿಸಲಾಗುತ್ತಿದ್ದು ಅಭಿವೃದ್ಧಿ ಮಾಡದೆ ಇದ್ದರೆ ಕರ್ನಾಟಕ ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವದಿಲ್ಲ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು