ಇತ್ತೀಚಿನ ಸುದ್ದಿ
ಮದ್ಯ ಖರೀದಿ ವಯಸ್ಸು ಇಳಿಸಲು ರಾಜ್ಯ ಸರ್ಕಾರ ನಿರ್ಧಾರ: 21ರಿಂದ 18ಕ್ಕೆ ಸಡಿಲಿಕೆ
15/01/2023, 15:34

ಬೆಂಗಳೂರು(reporterkarnataka.com): ಮದ್ಯ ಖರೀದಿಗೆ ಪ್ರಸ್ತುತ ಜಾರಿಯಲ್ಲಿರುವ ಕಾನೂನುಬದ್ಧ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ.1967 ಕಾಯ್ದೆಯಡಿ ಮದ್ಯ ಖರೀದಿಗೆ ನಿಗದಿಪಡಿಸಿರುವ ವಯೋಮಿತಿಯನ್ನು ಸಡಿಲಿಕೆ ಮಾಡಲಿದೆ.
ಪ್ರಸ್ತುತ ಕರ್ನಾಟಕದಲ್ಲಿ ಮದ್ಯ ಖರೀದಿಸಲು ವಯಸ್ಸನ್ನು 20ಕ್ಕೆ ನಿಗದಿಪಡಿಸಲಾಗಿದೆ. ಇದಕ್ಕಿಂತ ಕಡಿಮೆ ವಯಸ್ಸಿನ ಯುವಕರು/ಯುವತಿಯರು ಮದ್ಯ ಖರೀದಿ ಮಾಡಿದರೆ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯ ಖರೀದಿಗೆ ಗರಿಷ್ಠ 18 ವಯಸ್ಸನ್ನು ನಿಗದಿಪಡಿಸಿರುವಾಗ ನಮ್ಮ ರಾಜ್ಯದಲ್ಲೂ ಇದೇ ನಿಯಮ ಜಾರಿಯಾಗಲಿ ಎಂಬುದು ಮದ್ಯ ಮಾರಾಟಗಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.