12:34 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮದ್ಯ ಖರೀದಿ ಇನ್ನು ಸುಲಭ: ಲೈಸೆನ್ಸ್ ಪಡೆದು ಎಲ್ಲಿ ಬೇಕಾದರೂ ಖರೀದಿಸಬಹುದು; ರಾಜ್ಯ ಸರಕಾರದಿಂದ ಶೀಘ್ರ ಆದೇಶ?

17/05/2022, 08:02

ಬೆಂಗಳೂರು(reporterkarnataka.com): ತಾತ್ಕಾಲಿಕ ಅಥವಾ ಸಾಂದರ್ಭಿಕ ಸನ್ನದು ಪಡೆಯುವವರಿಗೆ ಮದ್ಯ ಖರೀದಿಸಲು ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, ಶೀಘ್ರ ಆದೇಶ ಪ್ರಕಟಿಸಲಿದೆ. ಹೀಗಾಗಿ ಮದ್ಯ ಖರೀದಿ ಇನ್ನು ಸುಲಭವಾಗಲಿದೆ.

ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಕೆಎಸ್ ಬಿಸಿಎಲ್ ಡಿಪೋಗಳಲ್ಲಿ ಮಾತ್ರವಲ್ಲದೆ ಇತರೆ ಮಧ್ಯ ಮಳಿಗೆಗಳಲ್ಲೂ ಖರೀದಿಗೆ ಅವಕಾಶ ನೀಡಲು ಏಪ್ರಿಲ್ ನಲ್ಲಿ ಕರಡು ನಿಯಮಗಳನ್ನು ಪ್ರಕಟಿಸಿತ್ತು, ಮದ್ಯ ಮಾರಾಟಗಾರರ ಒಕ್ಕೂಟ ಸೇರಿದಂತೆ ಯಾರು ಸಹ ಕರಡು ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ, ಹೀಗಾಗಿ ಸದ್ಯದಲ್ಲೇ ಅಂತಿಮ ಆದೇಶ ಪ್ರಕಟಿಸಲಾಗುವುದು ಎಂದು ಅಬಕಾರಿ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಲ್ -5 ಸನ್ನದುದಾರರು ಈವರೆಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ ಡಿಪೋಗಳಿಂದ ಮಾತ್ರ ಮದ್ಯ ಖರೀದಿ ಮಾಡಲು ಅನುಮತಿ ಇತ್ತು, ನಿಗದಿತ ದಿನಾಂಕದಂದು ಸನ್ನದು ಜೊತೆಗೆ ಡಿಪೋಗೆ ತೆರಳಿ ಆಗ ಲಭ್ಯವಿರುವ  ಮದ್ಯಗಳಿಗೆ ಇಂಡೆಂಟ್ ಸಲ್ಲಿಸಬೇಕಿತ್ತು, ಇಂಡೆಂಟ್ ಸಲ್ಲಿಸುವ ಮಧ್ಯ ಲಭ್ಯತೆ ಆಧಾರದ ಮೇಲೆ ನಿಗಮದ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕಿತ್ತು. ಬಳಿಕವಷ್ಟೇ ಮದ್ಯವನ್ನು ನೀಡಲಾಗುತ್ತಿತ್ತು. ಈ ವೇಳೆ ಅಗತ್ಯವಿರುವ ಬ್ರಾಂಡ್ ಮಧ್ಯ ಲಭ್ಯವಾಗುತ್ತಿರಲಿಲ್ಲ ಎಂಬ ದೂರುಗಳು ಇದ್ದವು, ಇದೀಗ ಅಬಕಾರಿ ಇಲಾಖೆ ನಿಯಮಗಳಿಗೆ ತಿದ್ದುಪಡಿ ತಂದು ಡಿಪೋಗಳಲ್ಲಿ ಮಾತ್ರವಲ್ಲದೆ ಸಿಎಲ್ -11 ಸಿಎಲ್ -2 ಚಿಲ್ಲರೆ ಮದ್ಯ ಮಾರಾಟ ಮಳಿಗೆ ಸಿಎಲ್ – 11 ಸಿ ಎಂ ಎಸ್ ಐ ಎಲ್ ಮಳಿಗೆಗಳಲ್ಲೂ ಸಿಎಲ್ -5 ಸನ್ನದು ತೋರಿಸಿ ಮಧ್ಯ ಖರೀದಿ ಮಾಡಬಹುದು, ಸಿಎಲ್ -5 ಸನ್ನದು ದಾರರಿಗೆ ಅಗತ್ಯವಿರುವ ಯಾವುದೇ ರೀತಿಯ ಮದ್ಯವನ್ನು ಸೂಕ್ತ ಬಿಲ್ಲುಗಳ ನಿರ್ವಹಣೆಯೊಂದಿಗೆ ನೀಡಲು ಅವಕಾಶ ನೀಡಲಾಗಿದೆ.

ಏನಿದು ಸಿಎಲ್ – 5 ಸನ್ನದು?: ಮದುವೆ, ಹುಟ್ಟುಹಬ್ಬ, ಆಚರಣೆ, ಬೀಗರೂಟ ಮತ್ತಿತರ ವಯಕ್ತಿಕ ಕಾರ್ಯಕ್ರಮಗಳಲ್ಲಿ ಮದ್ಯ  ಬಳಕೆಗೆ ತಾತ್ಕಾಲಿಕ ಸನ್ನದು ಪಡೆಯುವುದು ಕಡ್ಡಾಯ, ಸನ್ನದು ಅಥವಾ ಪರವಾನಗಿ ಪಡೆಯದೆ ಮದ್ಯ  ಬಳಕೆ ಮಾಡಿದರೆ  ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಎನ್ಒಸಿ ಪಡೆದು ಜಿಲ್ಲಾ ಅಬಕಾರಿ ಆಯುಕ್ತರ ಬಳಿ 10 ಸಾವಿರ ರೂ. ಶುಲ್ಕ ಪಾವತಿಸಿದರೆ ಒಂದು ದಿನದ ಮಟ್ಟಿಗೆ ಸಿಎಲ್ – 5 ಸನ್ನದು ದೊರೆಯಲಿದೆ.

ಮದ್ಯ ಪ್ರಿಯರಿಗೆ ಶಾಕ್: ಮಂಗಳವಾರ ದಿಂದ 3 ದಿನ ಬೆಂಗಳೂರಲ್ಲಿ ಸಿಗಲ್ಲ ಎಣ್ಣೆ ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಮಂಗಳವಾರ ದಿಂದ 3 ದಿನ ಬೆಂಗಳೂರಿನಲ್ಲಿ ಕೆಎಸ್ ಬಿಎಲ್ ನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮದ್ಯ ಸಿಗಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯ ಖರೀದಿ ಮಾಡದಿರಲು ನಿರ್ಧಾರ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು