ಇತ್ತೀಚಿನ ಸುದ್ದಿ
ಮಾಸ್ಕ್ ಪ್ರಕರಣ: ಮಂಗಳೂರಿನ ಪ್ರಸಿದ್ಧ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯರಿಗೆ ನೋಟಿಸ್
19/05/2021, 18:01
ಮಂಗಳೂರು(reporterkarnataka news): ನಗರದ ಖ್ಯಾತ ವೈದ್ಯ, ಕೊರೊನಾ ಬಗ್ಗೆ ನಿಖರ ಹಾಗೂ ಸ್ಪಷ್ಟವಾಗಿ ವಿಶ್ಲೇಷಿಸಬಲ್ಲ ವೈರಲಾಜಿಸ್ಟ್ ಡಾ. ಶ್ರೀನಿವಾಸ ಕಕ್ಕಿಲ್ಲಾಯ ವಿರುದ್ಧ ದೂರ ದಾಖಲಾಗಿದೆ. ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಡಾ. ಕಕ್ಕಿಲ್ಲಾಯ ವಿರುದ್ಧ ದೂರು ನೀಡಲಾಗಿತ್ತು.
ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್ ಪಾಲುದಾರ ರೇನ್ ರೊಸಾರಿಯೋ ಕದ್ರಿ ಠಾಣೆಗೆ ದೂರು ನೀಡಿದ್ದರು. ವೈದ್ಯರು ಸೂಪರ್ ಮಾರ್ಕೆಟ್ ಸಿಬ್ಬಂದಿಗಳ ಜತೆ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂಬ ಮಾರ್ಗಸೂಚಿಯನ್ನು ಡಾ. ಕಕ್ಕಿಲ್ಲಾಯ ಅವರು ಉಲ್ಲಂಘಿಸಿದ್ದಾರೆ. ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ತಿಳಿಸಿದ್ದರು.