ಇತ್ತೀಚಿನ ಸುದ್ದಿ
Madikeri | ಕಾಡಾನೆಗಳ ದಾಳಿ: 3 ವಾಹನಗಳು ಸಂಪೂರ್ಣ ಜಖಂ
30/12/2025, 09:42
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ತಾಲೂಕು ಬಲ್ಲಮಾವಟಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ, ಇಲ್ಲಿನ ಮಂಜತ್ ಗಿರಿಜನ ಕಾಲೋನಿ ಬಳಿ ನಿಲ್ಲಿಸಿದ್ದ ವಾಹನಗಳ ಮೇಲೆ ದಾಳಿ ನಡೆದಿದ್ದು ಮೂರು ವಾಹನ ನಜ್ಜುಗುಜ್ಜು ಆಗಿದೆ. ಕಾಲೋನಿ ನಿವಾಸಿಗಳಾದ ಕೆ.ಕೆ.ಅರ್ಜುನ ರಿಗೆ ಸೇರಿದ ಆಟೋ,ಕೆ.ಪಿ.ಪೊವಯ್ಯ ಅವರಿಗೆ ಸೇರಿದ ಆಟೋ ಸೇರಿದಂತೆ ಪಿ. ಎಂ.ಪೂಣಚ್ಚರಿಗೆ ಸೇರಿದ ಬೈಕ್ ಹಾನಿಗೆ ಒಳಗಾಗಿದೆ.

ಕಾಫಿ ಕುಯಿಲು ಸಂದರ್ಭ ಈ ಭಾಗದ ಕಾರ್ಮಿಕರಲ್ಲಿ ಆತಂಕ ಮನೆ ಮಾಡಿದ್ದು,ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.













