ಇತ್ತೀಚಿನ ಸುದ್ದಿ
Madikeri | ದಕ್ಷಿಣ ಕೊಡಗು: ಹುಲಿ ಸೆರೆ ಕಾರ್ಯಾಚರಣೆ; ಸಾಕಾನೆಗಳ ಸಹಾಯದಿಂದ ನಡೆಸುತ್ತಿದ್ದ ಕೂoಬಿಂಗ್ ಸ್ಥಗಿತ
24/07/2025, 10:40

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ ಏಳು ದಿನಗಳಿಂದ ಹುಲಿ ಸೆರೆಗೆ ಅರಣ್ಯ ಸಿಬ್ಬಂದಿಗಳು ಮಳೆಯ ನಡುವೆ ಸಾಕಾನೆಗಳ ಸಹಾಯದಿಂದ ನಡೆಸುತ್ತಿದ್ದ ಕೂoಬಿoಗ್ ಸ್ಥಗಿತಗೊಳಿಸಿದ್ದು, ಅರಣ್ಯ ಸಿಬ್ಬಂದಿಗಳು ಎಂದಿನಂತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ದಕ್ಷಿಣ ಕೊಡಗಿನಲ್ಲಿ ರೈತರ ಜಾನುವಾರುಗಳ ಮೇಲೆ ಹುಳಿಯು ನಿರಂತರ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಮತ್ತಿಗೋಡು ಕ್ಯಾಂಪ್ ನಿಂದ ಭೀಮಾ ಮತ್ತು ಬಳ್ಳೆ ಕ್ಯಾಂಪ್ ನಿಂದ ಮಹೇಂದ್ರ ಸಾಕಾನೆಗಳನ್ನು ಬಳಸಿಕೊಂಡು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಹುಲಿ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಂತೆ ವಿವಿಧ ತಂಡಗಳು ಕಾರ್ಯಾಚರಣೆ ನಡೆಸಿದರೂ ಹುಲಿಯ ಗುರುತು ಹಾಗೂ ಚಲನವಲನ ಪತ್ತೆ ಸಾಧ್ಯವಾಗಿಲ್ಲ. ವಿವಿಧೆಡೆ ಕ್ಯಾಮರಾಗಳನ್ನು ಅಳವಡಿಸಿ ಹುಲಿಯ ಚಿತ್ರ ಸೆರೆಗೆ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಿಲ್ಲ. ಇದೀಗ ಸಾಕಾನೆಗಳ ಕಾರ್ಯಾಚರಣೆಯನ್ನು ಹಿಂದಕ್ಕೆ ಪಡೆಯಲಾಗಿದ್ದು, ಎಂದಿನಂತೆ 11ನೇ ದಿನ ಅರಣ್ಯ ಸಿಬ್ಬಂದಿಗಳು ಕೂoಬಿoಗ್ ಮುಂದುವರೆಸಲಿದ್ದಾರೆ.