7:23 AM Monday21 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಮಾದಕವಸ್ತುಗಳು ದೈಹಿಕ, ಮಾನಸಿಕವಾಗಿ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ: ಡಿವೈಎಸ್ಪಿ ಗಜಾನನ ವಾಮನ ಸುತಾರ

07/11/2024, 21:36

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಮಾದಕವಸ್ತುಗಳು ದೈಹಿಕ, ಮಾನಸಿಕವಾಗಿ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಲಿದೆ. ದೈನಂದಿನ ಸೇವನೆಯ ಹವ್ಯಾಸ ಮೆದುಳಿಗೆ ತೊಂದರೆ ನೀಡಲಿದ್ದು ಖಿನ್ನತೆ ಸೃಷ್ಟಿಸಲಿದೆ ಎಂದು ಡಿವೈಎಸ್ಪಿ ಗಜಾನನ ವಾಮನ ಸುತಾರ ಹೇಳಿದರು.
ನೆಹರು ಯುವಕೇಂದ್ರ, ಶಿವಮೊಗ್ಗ, ಯುವಮಿತ್ರರು (ರಿ.) ತೀರ್ಥಹಳ್ಳಿ, ಹಳೆಯ ವಿದ್ಯಾರ್ಥಿಗಳ ಸಂಘ(ರಿ.) ಮತ್ತು ಸರ್ಕಾರಿ ಪ್ರಥಮದರ್ಜೆ ಕಾಲೇಜು ತೀರ್ಥಹಳ್ಳಿ ಜಂಟಿ ಸಹಭಾಗಿತ್ವದಲ್ಲಿ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಕುರಿತು ಜಾಗೃತಿ ಮತ್ತು ಶಿಕ್ಷಣ ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು ಈ ವೇಳೆ ಮಾತನಾಡಿದರು.
ಮಾದಕ ವಸ್ತುಗಳು ಸಸ್ಯ ರೂಪದಲ್ಲಿ ಅಥವಾ ರಾಸಾಯನಿಕ ಕ್ರಿಯೆಗಳ ಮೂಲಕ ತಯಾರಿ ಮಾಡಲಾಗುತ್ತದೆ. ಇವುಗಳ ಸೇವನೆ ಮತ್ತು ಮಾರಾಟ ಕಾನೂನು ಪ್ರಕಾರ ಅಪರಾಧ. ಅಂತಹ ಪ್ರಕರಣ ಕಂಡು ಬಂದರೆ 1985ರ ಎನ್ಡಿಪಿಎಸ್ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗುತ್ತಾರೆ. ಯುವಕರೇ ಹಚ್ಚಾಗಿ ಪಾಲ್ಗೊಳ್ಳುವ ಅಂತಹ 22 ಪ್ರಕರಣ ದಾಖಲಾಗಿದ್ದು ಅವರೆಲ್ಲರೂ ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಎಚ್ಚರಿಸಿದರು.
ಕನ್ನಡ ರಾಜ್ಯೋತ್ಸವ – ಸುವರ್ಣ ಕರ್ನಾಟಕ – 50 ಪ್ರಶಸ್ತಿ ಪುರಸ್ಕೃತ ನಿವೃತ್ತ ವೈದ್ಯಾಧಿಕಾರಿ ಡಾ.ಎಚ್.ಎಸ್.ಕೃಷ್ಣಪ್ಪ ಮಾದಕ ವಸ್ತುಗಳ ಕುರಿತು ಜಾಗೃತಿ ಭಿತ್ತಿ ಚಿತ್ರ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಾರ್ಜನಿಕರಿಗೆ ಬಹು ಮುಖ್ಯವಾದದ್ದು ಆರೋಗ್ಯ, ವಿದ್ಯಾರ್ಥಿಗಳು ಈ ದೆಸೆಯಲ್ಲಿ ಬಹುಮುಖ್ಯವಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ಮಾದಕ ವಸ್ತುಗಳು ಹಾಗೂ ದುಷ್ಚಟಗಳಿಂದ ವಿಮುಖರಾಗಿ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಡಾ.ಕೆ.ಟಿ.ಅನಿಕೇತನ್ ಮಾತನಾಡಿ, ಡ್ರಗ್ಸ್ ಸೇವನೆ ದೇಹದ ಡಿಎನ್ಎ ರಚನೆಯನ್ನು ಹಾಳು ಮಾಡುತ್ತದೆ. ಮುಂದಿನ ಪೀಳಿಗೆಯೂ ಅದರ ದುಷ್ಪರಿಣಾಮ ಅನುಭವಿಸುತ್ತಾರೆ. ಜನಪ್ರಿಯ ವಿದ್ಯಾರ್ಥಿಗಳ ಸಹವಾಸ ಮತ್ತು ಬಳಕೆ ಮಾಡಿದ ಚುಚ್ಚುಮದ್ದುಗಳನ್ನು ಹೆಚ್ಚು ಬಾರಿ ಹಂಚಿಕೊಳ್ಳುವುದು ಹೆಚ್ಐವಿ, ಹೆಪಟೈಟಿಸ್ ಸೇರಿದಂತೆ ಅನೇಕ ರೋಗಕ್ಕೆ ಕಾರಣವಾಗುತ್ತದೆ. ಉನ್ಮಾದ ಸೃಷ್ಟಿಸಿ ಆರೋಗ್ಯವನ್ನು ಹಾಳು ಮಾಡಲಿದೆ. ಸಂತೋಷಕ್ಕಾಗಿ ಅಡ್ಡದಾರಿ ಹಿಡಿಯುವ ತಪ್ಪು ದಾರಿಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಾರದು ಎಂದರು.
ಸಿಪಿಐ ಅಶ್ವಥಗೌಡ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು. ವಿದ್ಯಾರ್ಥಿದೆಸೆಯಲ್ಲಿ ಹೆಚ್ಚಿನ ಆಕರ್ಶಣೆಗಳಿಗೆ ಒಳಗಾಗದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು, ಮಾದಕ ವಸ್ತುಗಳನ್ನು ಮಾರುವುದು, ಸರಬರಾಜು ಮಾಡುವುದು ಅಲ್ಲದೇ ಸೇವಿಸಿದರೂ ಕಾನೂನು ಪ್ರಕಾರ ಅಪರಾಧ ಅಂತಹ ಸಮಯದಲ್ಲಿ ಅಪರಾಧಿಗೆ ಜೈಲು ಶಿಕ್ಷೆ ಉಂಟಾಗುತ್ತದೆ ಎಂದರು. ವಿದ್ಯಾರ್ಥಿಗಳು ಈ ಮಾದಕ ವ್ಯಸನಿಗಳ ಬಗ್ಗೆ ಅಥವಾ ಮಾದಕ ವಸ್ತುಗಳ ಮಾರಾಟದ ಬಗ್ಗೆ ಪೋಲೀಸ್‌ ಇಲಾಖೆಗೆ ಮಾಹಿತಿ ನೀಡಿದರೆ ಅಂತಹ ಮಾಹಿತಿಯನ್ನು ಆಧರಿಸಿ ಅಪರಾಧಿಗಳನ್ನು ಬಂಧಿಸಲಾಗುವುದು ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗದ ಜಿಲ್ಲಾ ಯುವ ಅಧಿಕಾರಿ ಉಲ್ಲಸ್ ಕೆ.ಟಿ.ಕೆ., ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಯುವಮಿತ್ರರು ಕಾರ್ಯದರ್ಶಿ ನಿರಂಜನ ವಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಸೌಮ್ಯ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ಯುವಮಿತ್ರರು (ರಿ.) ತೀರ್ಥಹಳ್ಳಿಯ ಸಂಯೋಜಕ ಚೇತನ್‌ ಜಿ ಸರ್ವರನ್ನು ಸ್ವಾಗತಿಸಿದರು ಹಾಗೂ ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಮಹಮ್ಮದ್ ಇಕ್ಬಾಲ್ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ವಂದಿಸಿದರು. ಯುವಮಿತ್ರರು ತಂಡದ ನಿರಂಜನ ಪವಾರ್‌, ವಿನಂತಿ ಪೈ, ರಾಹುಲ್ ಬಿ ಪಿ ಮತ್ತು ನೆಹರು ಯುವ ಕೇಂದ್ರದ ಸ್ವಯಂ ಸೇವಕ ಶಿವಕುಮಾರ್‌ ಟಿ. ಆರ್‌ ಮುಂತಾದವರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು