4:19 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮಾಣಿ: ಕರ್ನಾಟಕ ಪ್ರೌಢಶಾಲೆಯಲ್ಲಿ ರಾಜ್ಯೋತ್ಸವ ಕವಿಗೋಷ್ಠಿ

03/11/2024, 11:55

ಬಂಟ್ವಾಳ(reporterkarnataka.com): ಕರ್ನಾಟಕ ರಾಜ್ಯ ಬರಹಗಾರರ ಸಂಘ
ಹೂವಿನಹಡಗಲಿ ಜಿಲ್ಲಾ ಬರಹಗಾರರ ಸಂಘ ದಕ್ಷಿಣ ಕನ್ನಡ ಮತ್ತು ಕರ್ನಾಟಕ ಪ್ರೌಢ ಶಾಲೆ ಮಾಣಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕವಿಗೋಷ್ಠಿ ನಡೆಯಿತು.


ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ, ಕವಿ, ಸಾಹಿತಿ ಶಾಂತಾ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಬರಹಗಾರರ ಸಂಘದ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಮುಖ್ಯ ಅತಿಥಿಯಾಗಿ ಕನ್ನಡ ನಾಡು ನುಡಿ, ಸಂಸ್ಕೃತಿಯ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಕವಿಗೋಷ್ಠಿಗೆ ಉಪನ್ಯಾಸಕಿ ಗೀತಾ ಕೊಂಕೋಡಿ ಕವನ ವಾಚಿಸಿ ಚಾಲನೆ ನೀಡಿದರು.
ಹಿರಿಯ ಕವಿಗಳಾದ ಎಂ. ಡಿ. ಮಂಚಿ, ಡಾ.ಮೈತ್ರಿ ಭಟ್ ವಿಟ್ಲ, ಆನಂದ ರೈ ಅಡ್ಕಸ್ಥಳ, ಸತೀಶ್ ಬಿಳಿಯೂರು, ಎಸ್. ಜಯಶ್ರೀ ಶೆಣೈ ಬಂಟ್ವಾಳ, ರವೀಂದ್ರ ಕುಕ್ಕಾಜೆ, ಹೇಮಂತ್ ಕುಮಾರ್ ಡಿ, ಶ್ವೇತಾ ಡಿ.ಬಡಗಬೆಳ್ಳೂರು, ವಿಸ್ಮಿತಾ ಎಂ. ಪಡುಮಲೆ, ಚೇತನ್ ಹೆಚ್.ಎಂ, ದೇವಕಿ ಜೆ.ಜಿ ಬನ್ನೂರು, ಶ್ರೀಶಾವಾಸವಿ ತುಳುನಾಡ್, ಫಿಲೋಮಿನಾ ಐಡಾ ಲೋಬೊ, ಜಯರಾಮ ಕಾಂಚನ, ಯಶೋದಾ, ಮರಿಯಮ್ಮ ಸ್ವಾಬಿರಾ, ಜಮಿಹಾ ತಮ್ಮ ಸ್ವರಚಿತ ಕವನ ವಾಚಿಸಿದರು.
ಬರಹಗಾರರು ಹೆಚ್ಚು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು.ಕೇವಲ ನವಯುಗದ ಸಾಹಿತ್ಯಗಳನ್ನಷ್ಟೇ ಅಲ್ಲ ಹಳಗನ್ನಡ, ನಡುಗನ್ನಡವನ್ನೂ ಓದುವ ಅಭ್ಯಾಸ ಮಾಡಿಕೊಳ್ಳಬೇಕು.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯಲು ಅಭ್ಯಾಸ ಮಾಡಬೇಕು .ಕನ್ನಡವನ್ನು ನಿತ್ಯ ಬಳಸಬೇಕು.ಬರವಣಿಗೆಯಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು ಎಂದು ಅಧ್ಯಕ್ಷತೆ ನೆಲೆಯಲ್ಲಿ ಶಾಂತಾ ಪುತ್ತೂರು ಹೇಳಿದರು. ಕವನಗಳ ವಿಮರ್ಶೆ ಮಾಡಿ ಸ್ವರಚಿತ ಕವನ ವಾಚನ ಮಾಡಿದರು.
ಜಯರಾಮ ಕಾಂಚನ ಸ್ವಾಗತಿಸಿದರು.ಅಪೂರ್ವ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲಾ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು