ಇತ್ತೀಚಿನ ಸುದ್ದಿ
ಮಾಂಡ್ ಸೊಭಾಣ್ ಆಯೋಜಿಸಿದ 10 ದಿನಗಳ ‘ಕಿರ್ಣಾಂ’ ಸಮಾರೋಪ: 65 ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ
07/05/2022, 18:10

ಮಂಗಳೂರು(reporterkarnataka.com): ಇಂದು ಶಿಕ್ಷಣದ ಜೊತೆಗೆ ಭಾವನೆಗಳನ್ನು ಗುರುತಿಸುವ, ಗೌರವಿಸುವುದನ್ನು ಕಲಿಯುವ ಅಗತ್ಯವಿದೆ ಎಂದು ಎಂಆರ್ ಪಿ ಎಲ್ ಸಂಸ್ಥೆಯ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಜನರಲ್ ಮ್ಯಾನೇಜರ್ ರುಡಾಲ್ಫ್ ಜೋಯರ್ ನೊ ರೊನ್ಹಾ ಹೇಳಿದರು.
ಅವರು ಮಾಂಡ್ ಸೊಭಾಣ್ ಆಯೋಜಿಸಿದ ಹತ್ತು ದಿನಗಳ ಕಿರ್ಣಾಂ (ಕಿರಣಗಳು ) ಇದರ ಸಮಾರೋಪ ಸಮಾರಂಭದಲ್ಲಿ 65 ಜನ ಶಿಬಿರಾರ್ಥಿಗಳಿಗೆ ಸನ್ಮಾನ ಪತ್ರ ವಿತರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ವಿತೊರಿ ಕಾರ್ಕಳ ಶಿಬಿರ ಹೇಗೆ ನಡೆಯಿತು ಎಂಬ ಬಗ್ಗೆ ಮಾಹಿತಿ ನೀಡಿದರು. ಅಮಾನ್ ಕ್ರಿಸ್ ದಾಂತಿ ಮತ್ತು ಹೆಜೆಲ್ ಏಂಜಲ್ ಡಿಸೋಜ ಅವರು ಕೊಂಕಣಿ ಅಂಕಿ ಸಂಖ್ಯೆಗಳನ್ನು ಪ್ರಸ್ತುತ ಪಡಿಸಿದರು. ರಿಯಾ ಮೊಂತೆರೋ, ರಿಶೋನ್ ಸ್ವೀಡ್ ನೊರೊನ್ಹ ಮತ್ತು ಮರ್ಲಿನ್ ವೇಗಸ್ ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪೋಷಕರ ಪರವಾಗಿ ಅನಿತಾ ಲೋಬೊ ಮತ್ತು ರೋನಿ ಕ್ರಾಸ್ತ ಮಾತನಾಡಿದರು. ಮಾಂಡ್ ಸೋಬಾಣ ಅಧ್ಯಕ್ಷ ಲೂವಿ ಪಿಂಟೊ ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಯಶಸ್ಸಿಗಾಗಿ ದುಡಿದವರನ್ನು ಗೌರವಿಸಿದರು. ಇದೇ ವೇಳೆ ಶಿಬಿರದಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾರ್ಯದರ್ಶಿ ಕಿಶೋರ್ ಫರ್ನಾಡಿಸ್ ಮತ್ತು ಕೋಶಾಧಿಕಾರಿ ಎಲ್ರೋನ್ ರೋಡ್ರಿಗಸ್ ಉಪಸ್ಥಿತರಿದ್ದರು. ರೋಲ್ಫ್ ರಶ್ವಿತ್ ಲೋಬೊ ಮತ್ತು ಎಲ್ರಿಶ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ರೋಂವಿಲ್ ಡಿಸೋಜಾ ವಂದಿಸಿದರು. ಕೊನೆಯಲ್ಲಿ ತ್ಯಾ ಉಪ್ರಾಂತ್ ಕಿರು ನಾಟಕ ಪ್ರದರ್ಶಿಸಲಾಯಿತು.