10:04 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

91ರ ಹರೆಯದ ಮಾಜಿ ಪ್ರಧಾನಿ ದೇವೇಗೌಡರು ಮೋದಿ ಗೆಲ್ಲಿಸಿ ಎನ್ನುತ್ತಿದ್ದಾರೆ; ದಿನಬಳಕೆ ವಸ್ತುಗಳ ಬೆಲೆಯೇರಿಕೆ ಮಾಡಿದ್ದಕ್ಕಾ? ಗ್ಯಾಸ್, ಪೆಟ್ರೋಲ್ ಬೆಲೆ ಹೆಚ್ಚಿಸಿದಕ್ಕಾ?: ರಮೇಶ್ ಕುಮಾರ್ ಪ್ರಶ್ನೆ

20/04/2024, 20:20

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.ಕಂ

ಮಾಜಿ ಪ್ರಧಾನಿ, 91ರ ಹರೆಯದ ದೇವೇಗೌಡರು ನರೇಂದ್ರ ಮೋದಿ ಗೆಲ್ಲಿಸಿ ಅಂತ ಹೇಳುತ್ತಾರಲ್ಲಾ ಯಾವ ಕಾರಣಕ್ಕಾಗಿ? ಜನಸಾಮಾನ್ಯರು ಬಳಸುವ ದಿನಸಿ ಪದಾರ್ಥಗಳು ಬೆಲೆ ಹೆಚ್ಚಿಸಿದಕ್ಕಾಗಿಯಾ? ರೈತರ ಕೃಷಿ ಉಪಕರಣಗಳ ಬೆಲೆ ಜಾಸ್ತಿ ಮಾಡಿರುವುದಕ್ಕಾ? ಗ್ಯಾಸ್, ಪೆಟ್ರೋಲ್, ಡೀಸಲ್ ಬೆಲೆ ಜಾಸ್ತಿ ಮಾಡಿರುವುಕ್ಕಾ? ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಟಾಂಗ್ ನೀಡಿದರು.
ತಾಲೂಕಿನ ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಮದ ಬಸ್‌ನಿಲ್ದಾಣದ ಬಳಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು.
ನಿಮ್ಮ ಉತ್ತಮ ಭವಿಷ್ಯಕ್ಕಾಗಿ ಮತವನ್ನು ಮಾರಿಕೊಳ್ಳಬೇಡಿ. ನನ್ನ ಜೀವ ಇರುವವರೆಗೂ ನಿಮ್ಮ ಪಾದ ಬಳಿ ಇರುತ್ತೇನೆ. ನಾನು ನನ್ನ ಕುಟುಂಬಕ್ಕೆ ಆಸ್ತಿ , ಅಂತಸ್ತು ಮಾಡಿಕೊಡಲು ರಾಜಕೀಯಕ್ಕೆ ಬಂದವನಲ್ಲ. ಗೌತಮ್ ನನ್ನ ಮಗನ ತರಹ. ನನಗೆ ಯಾವ ರೀತಿಯಲ್ಲಿ ಅಭಿಮಾನವನ್ನು ಇಟ್ಟಿದ್ದೀರೋ ಅದೆ ಅವರ ಮೇಲೆ ಅಭಿಮಾನವಿರಲಿ. 5 ವರ್ಷ ನಿಮ್ಮ ಜೀತದಾಳಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾನೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಗೌತಮ್‌ಗೆ ಮತವನ್ನು ನೀಡುವುದರ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರುವಂತೆ ಮನವಿ ಮಾಡಿದರು.
ಈ ಹಿಂದೆ ವಿಧಾನಸಭೆ ಚುನಾವಣೆ ಸಮಯದಲ್ಲಿ ಯಾವ ಸಭೆಯಲ್ಲಿ ನೋಡಿದರೂ ಜನಸಾಗರವೇ ತುಂಬಿ ತುಳುಕುತ್ತಿತ್ತು . ಅಂದು ಜನಸಾಗರವನ್ನು ನೋಡಿ ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಆಶಭಾವನೆಯನ್ನು ಹೊತ್ತಿದ್ದೆ. ಆದರೆ ಫಲಿತಾಂಶವು ಬಂದ ನಂತರ ನನ್ನ ಆಶಾಭಾವನೆ ಭಗ್ನಗೊಂಡಿತು ಎಂದು ರಮೇಶ್‌ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೌತಮ್ ಮಾತನಾಡಿ, ಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ನುಡಿದಂತೆ ನಡೆಯದೆ , ದೇಶದ ಜನರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ನುಡಿದಂತೆ ನಡೆಯುವಂತೆ ಐದು ಗ್ಯಾರಂಟಿಗಳನ್ನು ಈಡೆರಿಸುತ್ತಿದೆ ಎಂದರು.
ನಿಮ್ಮ ರಕ್ಷಣೆಗಾಗಿ ಹಾಗೂ ನಿಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡುವಂತೆ ಮನವಿ ಮಾಡುತ್ತಾ, ನೀವು ಹಾಕುವಂತಹ ಪ್ರತಿ ಮತವು ದೇಶದ ಭವಿಷ್ಯಕ್ಕಾಗಿ ಎಂದು ನುಡಿದರು.

ರಾಜ್ಯ ದಲಿತ ನಾಯಕ ಎ‌ನ್. ಮುನಿಸ್ವಾಮಿ ,ಮುಖಂಡರಾದ ಸುಧಾಮ್, ಗೋಪಾಲ್, ವಿಜಯ ನರಸಿಂಹ ಚಿಂತಾಮಣಿ, ಜಿ.ಪಂ. ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬುಷು ಸಾಬ್. ಕೋಚಿಮುಲ್‌ ನಿರ್ದೇಶಕ ಎನ್. ಹನುಮೇಶ್, ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ .ಅಶೋಕ್, ಯುವ ಮುಖಂಡ ಗಾಂಡ್ಲಲ್ಲಿ ದರ್ಶನ್,ದಳಸನೂರು ಹರಿ, ಶಂಕರಪ್ಪ, ಸಂಜಯ್‌ ರೆಡ್ಡಿ, .ಕೆ.ಮಂಜು,ಪುರಸಭೆ ಸದಸ್ಯ ಭಾಸ್ಕರ್ , ಕೋಡಿಪಲ್ಲಿ ಸುಬ್ಬಿರೆಡ್ಡಿ, ರಮೇಶ್ ಹಾಗೂ ಕಾರ್ಯಕರ್ತರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು