9:43 PM Friday30 - January 2026
ಬ್ರೇಕಿಂಗ್ ನ್ಯೂಸ್
ಕಾನ್ಫಿಡೆಂಟ್‌ ಗ್ರೂಪ್‌ ಚೇರ್‌ಮೆನ್ ಸಿ.ಜೆ. ರಾಯ್‌ ಗುಂಡಿಕ್ಕಿಕೊಂಡು ಆತ್ಮಹತ್ಯೆ: ಐಟಿ ದಾಳಿಗೆ ಹೆದರಿದರೇ… ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ… ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವಿ ಬಿ ಜಿ ರಾಮ್… 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಉದ್ಘಾಟನೆ ಕೊಡಗು: ಮುಂದುವರಿದ ಆನೆ- ಮಾನವ ಸಂಘರ್ಷ; ಕಾಡಾನೆ ದಾಳಿಗೆ ಕಾರ್ಮಿಕ ಬಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರದ ಆರ್ಥಿಕ ನೀತಿಗಳೇ ಕಾರಣ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ನಮ್ಮ ಸರ್ಕಾರ ಯಾರ ಪೋನ್ ಟ್ಯಾಪ್ ಮಾಡುವುದಿಲ್ಲ: ಸಿಎಂ ಸಿದ್ದರಾಮಯ್ಯ ಕನ್ನಡ ಭಾಷೆ ಎಂದರೆ ಹಲವು ಆಯಾಮಗಳ ಸಾಧ್ಯತೆ: ಪುರುಷೋತ್ತಮ ಬಿಳಿಮಲೆ 600ಕ್ಕೂ ಹೆಚ್ಚು ಜಿಟಿಸಿಸಿ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿರುವ ರ‍್ಯಾಂಗ್‌ಸನ್ಸ್‌ ಏರೋಸ್ಪೇಸ್, ​​ಎಕ್ಸೈಡ್ ಎನರ್ಜಿ ಸುನಿಲ್ ಕುಮಾರ್ ಪರಶುರಾಮನ ಮೂರ್ತಿಯ ಫೈಬರ್ ನಲ್ಲಿ ಮಾಡಿಸಿ ಕಂಚಿನದ್ದು ಎಂದು ನಂಬಿಸಿದ್ದರು:…

ಇತ್ತೀಚಿನ ಸುದ್ದಿ

ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ತಂದೆ- ಮಗಳು ಜಸ್ಟ್ ಮಿಸ್: ಕೊಡಗಿನಲ್ಲಿ ತಪ್ಪಿದ ಭಾರಿ ಅನಾಹುತ, ವಿಡಿಯೋ ವೈರಲ್!

30/01/2026, 20:38

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕಾಡಾನೆ ಜೊತೆಗೆ ಶಾಲಾ ವಾಹನ ಚಾಲಕ ಹುಚ್ಚಾಟ ನಡೆಸಿದ್ದಾನೆ. ವಿಡಿಯೋ ಮಾಡುತ್ತಿದ್ದಾಗ ಕಾಡಾನೆ ಶಾಲಾ ಬಸ್ ಅನ್ನು ಅಟ್ಟಾಡಿಸಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಬಳಿ ಈ ಒಂದು ಘಟನೆ ನಡೆದಿದೆ.
ಮಗಳ ಕೈಯಲ್ಲಿ ಚಾಲಕ ಸುನಿಲ್ ವಿಡಿಯೋ ಮಾಡಿಸಿದ್ದಾನೆ.ಆನೆ ಹಿಮ್ಮುಖವಾಗಿ ಶಾಲಾ ವಾಹನ ಚಲಾಯಿಸಿ ಹುಚ್ಚಾಟ ಮೆರೆದಿದ್ದಾನೆ. ಶಾಲಾ ಮಕ್ಕಳನ್ನು ಬಿಟ್ಟು ಬರುವಾಗ ಒಂಟಿ ಸಲಗ ಎದುರಾಗಿತ್ತು. ವಾಹನ ನಿಲ್ಲಿಸಿ ಸುನಿಲ್ ಮಗಳಿಗೆ ವಿಡಿಯೋ ಮಾಡುವಂತೆ ಸೂಚನೆ ನೀಡಿದ್ದಾನೆ. ಸಿದ್ದಾಪುರದ ಬಿಜಿಎಸ್ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್ ಇದಾಗಿದ್ದು ಚಾಲಕನ ಹುಚ್ಚಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾಡಾನೆ ರಸ್ತೆ ಬದಿಯಲ್ಲಿ ಕಂಡು ಬಂದಿರುವ ಹಿನ್ನಲೆಯಲ್ಲಿ ನಿಧಾನಕ್ಕೆ ತೆರಳಿ ವಿಡಿಯೋ ಮಾಡಿದ್ದ ಚಾಲಕನ ನಿರ್ಲಕ್ಷ್ಯಕ್ಕೆ ಬಿಜಿಎಸ್ ಶಾಲೆ ಚಾಲಕ ಸೇರಿದಂತೆ ಮುಕ್ಯೋಪಾಧ್ಯಾಯರಿಗೆ ವಲಯ ಅರಣ್ಯ ಅಧಿಕಾರಿ ಗಂಗಾಧರ್ ನೋಟೀಸ್ ಜಾರಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು