12:52 PM Tuesday4 - November 2025
ಬ್ರೇಕಿಂಗ್ ನ್ಯೂಸ್
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ Mysore | ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿಎಂ ಸಿದ್ದರಾಮಯ್ಯ ನವಕಲಬುರಗಿ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ದ, ಲೀಪ್ ಯೋಜನೆಯ ಅಡಿಯಲ್ಲಿ ಅಭಿವೃದ್ದಿಗೆ ಒತ್ತು:… ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆಯಾಗದಂತೆ ತಡೆದ ಪೊಲೀಸರು: ಮಂಗಳೂರು ಪೊಲೀಸರ ಕಾರ್ಯಕ್ಕೆ… Kodagu | ಪೊನ್ನಂಪೇಟೆಯಲ್ಲಿ ಮಿತಿ ಮೀರಿದ ಬೀದಿ ನಾಯಿ ಹಾವಳಿ: ಶ್ವಾನ ದಾಳಿಗೆ… ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ರೈತರ ಚಳವಳಿ ಎದುರಿಸಬೇಕಾಗುತ್ತದೆ:… Bangalore | ರಾಜ್ಯದಲ್ಲಿ‌ ಕುಡಿಯುವ ನೀರು, ಒಳಚರಂಡಿ ಯೋಜನೆ: ಕೇಂದ್ರಕ್ಕೆ 6,500 ಕೋಟಿ… ಸೋಮವಾರಪೇಟೆ | ಸುಮಾರು 2.4 ಲಕ್ಷ ರೂ. ಮೌಲ್ಯದ ಕಾಳು ಮೆಣಸು ಕಳ್ಳತನ:…

ಇತ್ತೀಚಿನ ಸುದ್ದಿ

ಲಾಕ್ ಡೌನ್ ಹೆಸರಿನಲ್ಲಿ ಲೂಟಿ: ವ್ಯಾಪಾರಿಗಳು ಆಡಿದ್ದೇ ಆಟ, ಹೇಳಿದ್ದೇ ರೇಟ್; ಜಿಲ್ಲಾಧಿಕಾರಿಯವರೇ ನಿಗಾ ವಹಿಸಿ

30/05/2021, 08:15

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತಗಂಗಿ

info.reporterkarnataka@gmail.com

ತರಕಾರಿ, ಹಣ್ಣು- ಹಂಪಲು ಮಾರುವ ವ್ಯಾಪಾರಸ್ಥರು, ಜಿನಸಿ ಅಂಗಡಿಯವರು, ಕೋಳಿ- ಮಾಂಸದ ವ್ಯಾಪಾರಿಗಳು ಜನಸಾಮಾನ್ಯರನ್ನು ಹಿಡಿದು ತಿನ್ನಲು ಆರಂಭಿಸಿದ್ದಾರೆ. ಇದು ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ವಿಷಯ ಮಾತ್ರವಲ್ಲ, ಇಡೀ ಕರ್ನಾಟಕದ ಪರಿಸ್ಥಿತಿಯ ಅವಲೋಕನ. ಇದಕ್ಕೆ ಕಾರಣ ಕೊರೊನಾ ಲಾಕ್ ಡೌನ್.

ತರಕಾರಿ, ಹಣ್ಣು ಹಂಪಲು ರೇಟ್ ಗಗನಕ್ಕೇರಿದೆ. ತೆಂಗಿನ ಕಾಯಿ, ಕೊಬ್ಬರಿ ಜನಸಾಮಾನ್ಯರಿಗೆ ಎಟಕುತ್ತಿಲ್ಲ. ಸಕ್ಕರೆ, ಬೆಲ್ಲ, ಚಾಹುಡಿ, ಎಣ್ಣೆ, ಬೇಳೆ, ಮೆಣಸು, ಕೊತ್ತಂಬರಿ, ಜೀರಿಗೆ ಯಾವುದನ್ನೂ ಮುಟ್ಟಿದರೂ ರೇಟ್ ಎಂಬ ಕರೆಂಟ್ ಶಾಕ್ ಹೊಡೆಸುತ್ತದೆ. ಮಂಗಳೂರಿನಲ್ಲಿ ಕೊಳೆತು ಹೋದ ನೆಲ್ಲಿಕಾಯಿಯೊಂದು 5 ರೂಪಾಯಿಗೆ ಬಿಕಾರಿಯಾಗುತ್ತಿದೆ. ಲಿಂಬೆ ಹಣ್ಣಿನ ಸ್ಥಿತಿಯೂ ಇದೆ ಆಗಿದೆ. ಕೊರೊನಾ ಎರಡನೇ ಅಲೆ ಬೀಸಿದ ಬಳಿಕ ಕರಾವಳಿಯಲ್ಲಿ ನೆಲ್ಲಿಕಾಯಿ ಹಾಗೂ ಲಿಂಬೆ ಹಣ್ಣಿಗೆ ಡಿಮಾಂಡ್ ಜಾಸ್ತಿಯಾಗಿದೆ. ಕೊರೊನಾ ತಡೆಗಟ್ಟಲು ಇದು ಉಪಯುಕ್ತ ಎಂಬ ನಂಬಿಕೆ ಕರಾವಳಿ ಜನತೆಯದ್ದಾಗಿದೆ. ಹಾಗೆ ಕಿತ್ತಳೆ ಕೂಡ ಕೆಜಿಗೆ 180ರಿಂದ 200 ರೂ.ಗೆ ಏರಿದೆ. ಸಾಮಾನ್ಯ ದಿನಗಳಲ್ಲಿ ಇದನ್ನು ಕೆಜಿಗೆ 40 ರೂಪಾಯಿಗೆ ಕೊಳ್ಳಲು ಕೂಡ ಗಿರಾಕಿಗಳು ಸಿಗುತ್ತಿರಲಿಲ್ಲ. ಈಗ ಮಾತ್ರ ವಿಪರೀತ ಡಿಮಾಂಡ್. ಇದಕ್ಕೆಲ್ಲ ಲಾಕ್ ಡೌನ್, ಆಯಾ ಜಿಲ್ಲೆಗಳ ಜಿಲ್ಲಾಡಳಿತದ ವೈಫಲ್ಯ, ಬೆಲೆ ನಿಯಂತ್ರಣದ ಬಗ್ಗೆ ನಿಗಾ ಇಡಬೇಕಾಗಿದ್ದ ಜಿಲ್ಲಾಧಿಕಾರಿಗಳ ನಿರ್ಲಕ್ಷ್ಮ ಕಾರಣ ಆಗಿದೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಈ ರೀತಿಯ ಪರಿಸ್ಥಿತಿ ಇದ್ದರೆ ಉತ್ತರ ಕರ್ನಾಟಕ ಹಾಗೂ ಈಶಾನ್ಯ ಕರ್ನಾಟಕದ ಭಾಗದಲ್ಲಿ ಇನ್ನೂ ಕೆಟ್ಟ ಪರಿಸ್ಥಿತಿ ಇದೆ. ದುಪ್ಪಟ್ಟು ಹಣ ಸುಲಿಗೆ ಮಾಡುವ ಬಗ್ಗೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಸಾರ್ವಜನಿಕರು ಮಾತನಾಡುವುದು ಕೇಳಿ ಬರುತ್ತಿದೆ. ಕೊರೊನಾ ಎರಡನೇ ಅಲೆ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಹೇರಿರುವ ಕಠಿಣ ಲಾಕ್ ಡೌನ್ ನ್ನು ವ್ಯಾಪಾರಸ್ಥರು, ಕಾಳಸಂತೆಕೋರರು ಬಂಡವಾಳ ಮಾಡಿಕೊಂಡಿದ್ದಾರೆ. ಸಾರ್ವಜನಿಕರಿಂದ ಹಣ ದುಪ್ಪಟ್ಟು ಸುಲಿಗೆ ಮಾಡುತ್ತಿದ್ದಾರೆ.ಹಣ್ಣು- ಹಂಪಲು ಮುಟ್ಟಲಾರದಷ್ಟು ದುಬಾರಿಯಾಗಿದೆ.

ಮೆಣಸಿನ ಕಾಯಿ 80ರಿಂದ 100 ರೂಪಾಯಿ,ತಮಟೆ ಕಾಯಿ 40- 50 ರೂಪಾಯಿ, ಈರುಳ್ಳಿ 50-60 ರೂಪಾಯಿಗೆ ಬಿಕಾರಿಯಾಗುತ್ತಿದೆ. ಸರಕಾರ 3 ಕೆಜಿ ಈರುಳ್ಳಿಯನ್ನು 50 ರೂ.ಗೆ ಮಾರಾಟ ಮಾಡಲು ಆದೇಶ ನೀಡಿದೆ. ಆದರೆ ವ್ಯಾಪಾರಿಗಳು ಸರಕಾರದ ಆದೇಶಕ್ಕೆ ಮೂರು ಕಾಸಿನ ಬೆಲೆ ಕೊಡುತ್ತಿಲ್ಲ. ಸಾರ್ವಜನಿಕರು ಕೊರೊನಾದಿಂದ ಪಾರಾಗಲು ಮನೆಯಲ್ಲಿದ್ದು ಸರಕಾರ ಆದೇಶ್ ಪಾಲನೆ ಮಾಡುತ್ತಿದ್ದರೆ ವ್ಯಾಪಾರಿಗಳು ಹಗಲು ದರೋಡೆಯಲ್ಲಿ ತೊಡಗಿದ್ದಾರೆ. ಜಿಲ್ಲಾಧಿಕಾರಿಯವರೇ ಬೆಲೆ ಮೇಲೆ ನಿಗಾ ವಹಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು