ಇತ್ತೀಚಿನ ಸುದ್ದಿ
ಲಾಕ್ ಡೌನ್: ರಾಜ್ಯದಲ್ಲಿ ಜುಲೈ 5ರಿಂದ ಮತ್ತಷ್ಟು ಸಡಿಲಿಕೆ; ಶಾಲಾ-ಕಾಲೇಜು ಇಲ್ಲ, ಮಾಲ್, ಬಾರ್, ಸ್ಮಿಮ್ಮಿಂಗ್ ಪೂಲ್ ತೆರೆಯಲು ಅವಕಾಶ
03/07/2021, 20:01
ಬೆಂಗಳೂರು(reporterkarnataka news): ರಾಜ್ಯದಲ್ಲಿ ಲಾಕ್ ಡೌನ್ ಜುಲೈ 5ರಿಂದ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಜುಲೈ 19ರ ಬೆಳಗ್ಗೆ 5 ಗಂಟೆ ವರೆಗೆ ಜಾರಿಯಲ್ಲಿರುತ್ತದೆ.
ವಾರಾಂತ್ಯದ ಕರ್ಫ್ಯೂ ತೆಗೆಯಲಾಗಿದೆ. ರಾತ್ರಿ ಕರ್ಫ್ಯೂ ರಾತ್ರಿ 9ರಿಂದ ಬೆಳಗ್ಗೆ 5ರ ತನಕ ಜಾರಿಯಲ್ಲಿರುತ್ತದೆ. ಸರಕಾರಿ, ಖಾಸಗಿ ಕಚೇರಿ, ಕಾರ್ಖಾನೆಗಳನ್ನು ಶೇ.100 ಹಾಜರಾತಿಯೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಸರಕಾರಿ ಮತ್ತು ಖಾಸಗಿ ಬಸ್ ಗಳಿಗೆ ಶೇ.100 ಪ್ರಯಾಣಿಕರೊಂದಿಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಮಾಲ್, ಬಾರ್ ತೆರೆಯಲು ಗ್ರೀನ್ ಸಿಗ್ನಲ್ ದೊರೆತಿದೆ. ಶಾಲಾ-ಕಾಲೇಜು, ಪಬ್, ಥಿಯೇಟರ್ ಗಳಿಗೆ ಅವಕಾಶ ನೀಡಿಲ್ಲ. ಈಜುಕೊಳದಲ್ಲಿ ತರಬೇತಿ ಪಡೆಯುವವರಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಇವೆಲ್ಲ ಆಯಾ ಜಿಲ್ಲೆಗಳ ಪರಿಸ್ಥಿತಿಯ ಆಧಾರದಲ್ಲಿ ತೆರೆದುಕೊಳ್ಳಲಿದೆ. ಜಿಲ್ಕಾಡಳಿತಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಮಾಧ್ಯಮ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ತಿಳಿಸಿದರು.