1:37 PM Tuesday3 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಜೀವನಹಳ್ಳಿಯಲ್ಲಿ ಫುಟ್ಬಾಲ್ ಟರ್ಫ್‌ ನಿರ್ಮಾಣಕ್ಕೆ ಆಗ್ರಹಿಸಿ ಸ್ಥಳೀಯರ ಪ್ರತಿಭಟನೆ

29/11/2025, 22:01

ಬೆಂಗಳೂರು(reporterkarnataka.com): ಸರ್ವಜ್ಞ ನಗರದ ಜೀವನಹಳ್ಳಿಯಲ್ಲಿ ಫುಟ್ಬಾಲ್ ಟರ್ಫ್‌ ನಿರ್ಮಾಣಕ್ಕೆ ಕೇಳಿ ಬಂದಿರುವ ವಿರೋಧಕ್ಕೆ ಬಗ್ಗದೇ, ಕ್ರೀಡಾಂಗಣ ನಿರ್ಮಾಣ ಆಗಬೇಕೆಂದು ಆಗ್ರಹಿಸಿ ಸ್ಥಳೀಯರು ಕ್ರೀಡಾಂಗಣದ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.


ಇಂಧನ ಸಚಿವರು ಹಾಗೂ ಸರ್ವಜ್ಞ ನಗರದ ಶಾಸಕರಾದ ಕೆ.ಜೆ.ಜಾರ್ಜ್ ಅವರ ದೂರದೃಷ್ಟಿಯ ಫಲವಾಗಿ ಜೀವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡದಲ್ಲಿ ಫುಟ್ಬಾಲ್ ಟರ್ಫ್ ನಿರ್ಮಾಣವಾಗುತ್ತಿದೆ. ಆದರೆ, ಈ ಟರ್ಫ್ ಅನುಕೂಲಸ್ಥರಿಗೆ ಮಾತ್ರವೇ ಹೊರತು ಸಾಮಾನ್ಯರಿಗೆ ಈ ಕ್ರೀಡೆಯ ಸೌಲಭ್ಯವಿರುವುದಿಲ್ಲ. ಕ್ರೀಡಾಂಗಣ ಬಳಕೆಗೆ ಹಣ ಪೀಕಿಸುತ್ತಾರೆ ಎಂದು ಸ್ಥಳೀಯರೆಂದು ಬಿಂಬಿಸಿಕೊಂಡಿದ್ದವರು ಕೆಲ ದಿನಗಳ ಹಿಂದೆ ಅಪಪ್ರಚಾರ ಮಾಡಿದ್ದರು. ಇದನ್ನು ವಿರೋಧಿಸಿ, ಸರ್ವಜ್ಞನ ನಗರದ ಶಾಲಾ ಮಕ್ಕಳು ಸೇರಿದಂತೆ ಸ್ಥಳೀಯರು ಕ್ರೀಡಾಂಗಣದ ಬಳಿ ಪ್ರತಿಭಟನೆ ನಡೆಸಿದರು.
ಸಚಿವ ಕೆ.ಜೆ.ಜಾರ್ಜ್ ಅವರನ್ನು ಆದಷ್ಟು ಬೇಗ ಕ್ರೀಡಾಂಗಣವನ್ನು ಕಟ್ಟಿಕೊಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ‘ಜೀವನಹಳ್ಳಿಯಲ್ಲಿ ಇಂಥ ಗುಣಮಟ್ಟದ ಕ್ರೀಡಾಂಗಣ ಬರುತ್ತಿರುವುದನ್ನು ಸಹಿಸದ ವಿರೋಧಿಗಳು ಇಂಥ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇಂಥ ಟೊಳ್ಳು ಬೆದರಿಕೆಗೆ ಬಗ್ಗದೇ ನಮ್ಮ ಶಾಸಕರು ಕ್ರೀಡಾ ಸೌಕರ್ಯವನ್ನು ಒದಗಿಸಬೇಕು,’ ಎಂದು ಆಗ್ರಹಿಸಿದ್ದಾರೆ.
ಸರ್ವಜ್ಞ ನಗರ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರ ವಿಶೇಷ ಮುತುವರ್ಜಿಯಿಂದ, ಸಿಎಸ್‌ಆರ್ ಅನುದಾನದಲ್ಲಿ ಜೀವನಹಳ್ಳಿಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಫುಟ್ಬಾಲ್ ಟರ್ಫ್ ನಿರ್ಮಿಸಲಾಗುತ್ತಿದೆ. ಕಾಂಪ್ಲೆಕ್ಸ್ ನೆಲ ಅಂತಸ್ಥಿನಲ್ಲಿ ಯೋಗ, ಜಿಮ್ನಾಷಿಯಮ್ ಹಾಗೂ ಮೊದಲ ಅಂತಸ್ಥಿನಲ್ಲಿ ಎರಡು ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ಫುಟ್ಬಾಲ್ ಟರ್ಫ್ ಸುತ್ತಲೂ ವೀಕ್ಷಕರ ಗ್ಯಾಲರಿ ಸಿದ್ದವಾಗುತ್ತಿದೆ. ಆಧುನಿಕ ಶೈಲಿಯಲ್ಲಿ ಎದ್ದುನಿಂತಿರುವ ಕ್ರೀಡಾ ಸಂಕೀರ್ಣ ಮಕ್ಕಳಿಗೆ ಕ್ರೀಡಾ ಸ್ಪೂರ್ತಿಯ ತಾಣವಾಗಲಿದೆ ಎಂದು ಸ್ಥಳೀಯರು ಹೇಳಿದರು.

*ಅಮಲಿನ ಅಡ್ಡವಾಗಿದ್ದ ಸ್ಥಳ:* ಕ್ರೀಡಾಂಗಣ ತಲೆ ಎತ್ತುವ ಮೊದಲು ಸಂಜೆ ನಂತರ ಸ್ಥಳೀಯರು ವಿಶೇಷವಾಗಿ ಮಹಿಳೆಯರು, ಮಕ್ಕಳು ಈ ಕಡೆ ಬರಲು ಭಯ ಪಡುತ್ತಿದ್ದರು. ಕುಡುಕರು, ಪುಂಡರ ಹಾವಳಿಗೆ ಹೆಣ್ಣು ಮಕ್ಕಳು, ಸಣ್ಣ ಮಕ್ಕಳು ತತ್ತರಿಸಿದ್ದರು. ಈ ಸಮಸ್ಯೆಗೆ ಸಚಿವ ಕೆ.ಜೆ.ಜಾರ್ಜ್ ನೀಡಿದ ಪರಿಹಾರವೇ ‘ಕ್ರೀಡಾ ಹಬ್’ ನಿರ್ಮಾಣ. ಸಚಿವರ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದ ಸ್ಥಳೀಯರಿಗೆ ಕೆಲವರ ಅಪಪ್ರಚಾರ ಆತಂಕ ಸೃಷ್ಟಿಸಿದೆ. ಕನಸಿನ ಕ್ರೀಡಾಂಗಣದ ಯೋಜನೆ ಕೈಬಿಡಬಾರದು ಎಂದು ಆಗ್ರಹಿಸಿ ಜೀವನಹಳ್ಳಿ ಜನ ಇಂದು ಪ್ರತಿಭಟನೆ ನಡೆಸುವಂತಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು