ಇತ್ತೀಚಿನ ಸುದ್ದಿ
ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ ಸಭೆ: ನೂತನ ಪದಾಧಿಕಾರಿಗಳ ಆಯ್ಕೆ
29/06/2022, 14:30

ಮಂಗಳೂರು(reporterkarnataka.com):
ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿಯ ಸಭೆಯು ಜಿ.ಕೆ. ಹರಿಪ್ರಸಾದ್ ರೈ ಅವರ ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ವುಡ್ ಲಾಂಡ್ಸ್ ನಲ್ಲಿ ಪ್ರಾಂತ್ಯ 12ರ ಪ್ರಾಂತ್ಯ ಅಧ್ಯಕ್ಷರಾದ
ಜ್ಯೋತಿ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ
ನಡೆಯಿತು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
2022-23ರ ಸ್ಥಾಪಕ ಅಧ್ಯಕ್ಷರಾಗಿ ಲಯನ್ ಜಿ.ಕೆ. ಹರಿಪ್ರಸಾದ್ ರೈ ಕಾರಮೊಗರುಗುತ್ತು, ಕಾರ್ಯದರ್ಶಿ ಮೋಹನ್ ಶಿರ್ಲಾಲ್, ಕೋಶಾಧಿಕಾರಿಯಾಗಿ ರಂಜಿತ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ಲೇವಿ ಗ್ಲಾಡಿಸ್ ಡಿಮೆಲ್ಲೋ, ಮಾರ್ಕೆಟಿಂಗ್ ಚೇರ್ ಪರ್ಸನ್ ಲತಾ ಕಲ್ಲಡ್ಕ, ಸರ್ವಿಸ್ ಚೇರ್ ಪರ್ಸನ್ ನಾಗರಾಜ್ ಬಜಾಲ್, ಲಯನ್ ಟೇಮ್ ಅಂಜನ ಪ್ರಭಾಕರ್, ಗೋಲ್ಡನ್ ಮೆಂಬರ್ ಸನ್ಮಾತ್ ಹೆಗ್ಡೆ ಕುಂದಾಪುರ, ಜೆ ಕೆ ನಿತ್ಯಾನಂದ ರಾವ್, ಸುರೇಶ್ ವಸಿಷ್ಠ ಅವಿರೋಧವಾಗಿ ಆಯ್ಕೆಗೊಂಡರು.
ಸುಭಾಷ್ ರೈ, ಉದಯ ಆಚಾರ್ಯ ಹಾಗೂ ಸುರೇಶ್ ಶೆಟ್ಟಿ ಅವಿರೋಧವಾಗಿ ಆಯ್ಕೆಗೊಂಡರು.