ಇತ್ತೀಚಿನ ಸುದ್ದಿ
ಲಿಂಗಸಗೂರು: ಜಿಪಂ ಅನುದಾನದ ತುಂಡು ಗುತ್ತಿಗೆ ರದ್ದುಗೊಳಿಸಿ ಟೆಂಡರ್ ಕರೆಯಲು ಆಗ್ರಹ
30/12/2024, 20:27
ಅಮರೇಶ್ ಲಿಂಗಸಗೂರು ರಾಯಚೂರು
info.reporterkarnataka@gmail.com
ಲಿಂಗಸಗೂರು ತಾಲೂಕಿನ ಜಿಲ್ಲಾ ಪಂಚಾಯಿತಿ ಅನುದಾನ ಹಾಗೂ ಲಿಂಕ್ ಡಾಕುಮೆಂಟ್ ಅನುದಾನವನ್ನು ಪರ್ಸೇಂಟ ಮೇಲೆ ತುಂಡು ಗುತ್ತಿಗೆ ನೀಡಲಾಗುತ್ತಿದ್ದು, ಕೂಡಲೇ ಇದನ್ನು ರದ್ದುಗೊಳಿಸಿ ಟೆಂಡರ್ ಕರೆಯಬೇಕೆಂದು ಕರ್ನಾಟಕ ಬಹುಜನ ಚಳುವಳಿಯ ಅಮರೇಶ ಗೋಸಲೆ ಒತ್ತಾಯಿಸಿದ್ದಾರೆ.
ಅವರು ಮುಖ್ಯ ಕಾರ್ಯನಿರ್ವಾಹಕರು ರಾಯಚೂರು ಅವರಿಗೆ ಪತ್ರ ಬರೆದು ಲಿಂಗಸಗೂರು ತಾಲೂಕಿನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಉಪವಿಭಾಗ ಲಿಂಗಸಗೂರು ಇವರು ಜಿಲ್ಲಾ ಪಂಚಾಯತ್ ಅನುದಾನ, ಹಾಗೂ ಲಿಂಕ್ ಡಾಕುಮೆಂಟ್ ಅನುದಾನದಲ್ಲಿ ದುರಸ್ತಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೆ ಮಾಹಿತಿ ನೀಡದೆ ತಮಗೆ ಬೇಕಾದ ಗುತ್ತಿಗೆದಾರ ಅಥವ ಜನಪ್ರತಿನಿಧಿಗಳ ಗಮನಕ್ಕೆ ಮಾತ್ರ ತಂದು ಹೊಂದಾಣಿಕೆ ಮಾಡಿಕೊಂಡು ಒಂದು ಲಕ್ಷಕ್ಕೆ 6ರಿಂದ 7 ಪರ್ಸೆಂಟೇಜ್ ಪಡೆದು ಕಾಮಗಾರಿಗಳನ್ನು ನೀಡಿ ಅಗ್ರಿಮೆಂಟ್ ಮಾಡುತಿದ್ದಾರೆ. ಇದರಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಶಾಮಿಲಾಗಿ ತುಂಡುಗುತ್ತಿಗೆ ನೀಡಿ ಸರಕಾರದ ಹಣ ಲೂಟಿ ಮಾಡುವ ಉನ್ನಾರ ನಡೆಸಿದ್ದಾರೆ. ಗುತ್ತಿಗೆದಾರರು 6ರಿಂದ 7 ಪರ್ಸಂಟೇಜ್ ನಿಡಿ ಕಾಮಗಾರಿಗಳನ್ನು ಗುತ್ತಿಗೆ ಪಡೆಯುವ ಗುತ್ತಿಗೆದಾರ ಅದೆಷ್ಟು ಗುಣಮಟ್ಟದ ಕಾಮಗಾರಿ ಮಾಡಬಲ್ಲ ಎನ್ನುವುದು ಮೇಲುನೋಟಕ್ಕೆ ಕಂಡುಬರುತ್ತಿದೆ. ಅದಕ್ಕಾಗಿ ತುಂಡುಗುತ್ತಿಗೆಯನ್ನು ರದ್ದುಗೊಳಿಸಬೇಕು ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಬೇಕು ಎಂದು ಅವರು ಒತ್ತಾಯಿಸಿ ಮನವಿ ಸಲ್ಲಿಸಿದಾರೆ.
ಈ ಸಂದರ್ಭದಲ್ಲಿ ಅಮರೇಶ ಗೋಸ್ಲೆ, ಅಮರೇಶ ಪವಾರ, ಶಿವಕುಮಾರ ಮುಂತಾದವರು ಉಪಸ್ಥಿತರಿದ್ದರು.