10:09 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಚಿಪ್ಪು ಹಂದಿಗೆ ಜೀವದಾನ: ಬೊಮ್ಮರಬೆಟ್ಟಿನಲ್ಲಿ 50 ಅಡಿ ಬಾವಿಯಿಂದ ರಕ್ಷಣೆ

19/06/2025, 22:35

ಹಿರಿಯಡ್ಕ(reporterkarnataka.com): ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿಯಲ್ಲಿ ಗುರುವಾರ ಸಂಜೆ 50 ಅಡಿ ಆಳದ ಬಾವಿಗೆ ಬಿದ್ದುಬಿಟ್ಟಿದ್ದ ಅಪರೂಪದ ಚಿಪ್ಪು ಹಂದಿ ಅನ್ನು ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಸಂಜೆಯ ವೇಳೆಗೆ ಈ ಘಟನೆ ಬೆಳಕಿಗೆ ಬಂದು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ವಿತಿನ್ ಹಿರಿಯಡ್ಕ ಅವರು ತಕ್ಷಣವೇ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಅವರಿಗೆ ವಿಷಯ ತಿಳಿಸಿದರು.
*ಸ್ಪಂದನೆ ತಕ್ಷಣ:* ಕುಲಾಲ್ ಅವರು ಅರಣ್ಯ ಇಲಾಖೆಯ ತಂಡವನ್ನು ಸ್ಥಳಕ್ಕೆ ಕರೆದೊಯ್ದರು.
ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸತತ ಪ್ರಯತ್ನದ ಫಲವಾಗಿ, ನೀರೆಯ ಸುನಿಲ್ ಎಂಬವರು ಬಾವಿಗೆ ಇಳಿದು 20 ಅಡಿ ಆಳದಲ್ಲಿದ್ದ ಚಿಪ್ಪು ಹಂದಿಯನ್ನು ಹಿಡಿದು ಮೇಲಕ್ಕೆತ್ತಿದರು.
ಈ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವೀರೆಶ್, ಅರಣ್ಯ ರಕ್ಷಕರು ಪ್ರವೀಣ್, ಶ್ರೀಧರ್ ನರೇಗಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.


ಅನಂತರ, ಚಿಪ್ಪು ಹಂದಿಯನ್ನು ಸುಸ್ಥಿತಿಯಲ್ಲಿ ಹಿಡಿದು, ಬಯಲು ಪ್ರದೇಶದ ರಕ್ಷಿತ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿಲಾಯಿತು.
ಚಿಪ್ಪು ಹಂದಿ (European Hedgehog) ಒಂದು ಸಸ್ತನಿಯ ಆಗಿದ್ದು, ಮಣ್ಣು ಮತ್ತು ಮರದ ಪೊತರೆಗಳಲ್ಲಿ ವಾಸವಿದ್ದು, ಇರುವೆ ಮತ್ತು ಗೆದ್ದಲುಗಳನ್ನು ಆಹಾರವನ್ನಾಗಿಸಿಕೊಂಡು ಬದುಕುತ್ತದೆ. ಇದು ಏಶ್ಯಾ ಮತ್ತು ಯುರೋಪ್ ಖಂಡದಲ್ಲಿ ಕಂಡುಬರುವ ಅಪರೂಪದ ಪ್ರಾಣಿ.

ಇತ್ತೀಚಿನ ಸುದ್ದಿ

ಜಾಹೀರಾತು