ಇತ್ತೀಚಿನ ಸುದ್ದಿ
ಪುಸ್ತಕ ಕೊಳ್ಳುವ ಶಕ್ತಿ ಇಲ್ಲದ ಓದುಗರಿಗೆ ಗ್ರಂಥಾಲಯ ಉಪಯುಕ್ತವಾಗಿದೆ: ನಾರಾಯಣ ಮೂರ್ತಿ
21/11/2025, 11:31
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಅಮೇರಿಕಾ ಜನಸಂಖ್ಯೆಯ ಶೇಕಡಾ 70ರಷ್ಟು ಜನರು ಗ್ರಂಥಾಲಯಗಳನ್ನು ಬಳಸಿಕೊಳ್ಳುತ್ತಾರೆ. ಭಾರತದಲ್ಲಿ ಅಷ್ಟೇ ಸಂಖ್ಯೆಯ ಅನಕ್ಷರಸ್ಥರಿದ್ದಾರೆ.
ಕೈಗೆಟುಕುವ ಗ್ರಂಥಾಲಯ ಅಥವಾ ಲಿಟಲ್ ಫ್ರೀ ಲೈಬ್ರರಿ
ಮಾದರಿಯಲ್ಲಿ ಎಲ್ಲಾ ಕಡೆಗಳಲ್ಲಿ ಗ್ರಂಥಾಲಯ
ನಿರ್ಮಾಣವಾಗಬೇಕು ಎಂದು ನಿವೃತ್ತ ಗ್ರಂಥಪಾಲಕ
ನಾರಾಯಣಮೂರ್ತಿ ಅಭಿಪ್ರಾಯಿಸಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ
ಗ್ರಂಥಾಲಯ ಶಿವಮೊಗ್ಗ ವತಿಯಿಂದ ಇಲ್ಲಿನ ಕುವೆಂಪು
ಸ್ಮಾರಕ ಶಾಖಾ ಗ್ರಂಥಾಲಯದಲ್ಲಿ ನಡೆದ ರಾಷ್ಟ್ರೀಯ
ಗ್ರಂಥಾಲಯ ಸಪ್ತಾಹ ಹಾಗೂ ವರ್ಷದ ಓದುಗ ಪ್ರಶಸ್ತಿ
ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುಸ್ತಕ ಕೊಳ್ಳುವ ಶಕ್ತಿ ಇಲ್ಲದ ಓದುಗರಿಗೆ ಗ್ರಂಥಾಲಯ
ಉಪಯುಕ್ತವಾಗಿದೆ. ಸದಸ್ಯತ್ವ ಅಭಿಯಾನ ಕೂಡ
ಹೆಚ್ಚಬೇಕು. ನಿವೃತ್ತ ವೇತನದಲ್ಲಿ ಪ್ರತಿ ತಿಂಗಳು 5 ರಿಂದ
10 ಸಾವಿರ ವೆಚ್ಚದ ಪುಸ್ತಕಗಳನ್ನು ಓದುಗರಿಗೆ
ತಲುಪಿಸುವ ಪ್ರಯತ್ನ ನಡೆಸಿದ್ದೇನೆ. ಇಲ್ಲಿಯವೆರೆಗೆ 600
ಶಾಲೆಗಳಿಗೆ ಸಹಾಯ ಮಾಡಿದ್ದು ಸುಮಾರು 18 ಸಾವಿರ ಪುಸ್ತಕ ಹಂಚಿದ್ದೇನೆ ಎಂದರು.
“ನಗರ ಪ್ರದೇಶದಲ್ಲಿ ಸಂಚಾರಿ ಗ್ರಂಥಾಲಯ ನಡೆಯುತ್ತಿದೆ. ಅಂತಹ ಸೌಲಭ್ಯ ನಮ್ಮಲ್ಲಿಯೂ ಅವಶ್ಯಕತೆ ಇದೆ. ಮನೆಯ ಮುಂಭಾಗದಲ್ಲಿಯೇ ಪುಸ್ತಕಗಳು ಲಭ್ಯವಾಗುವಂತಾದರೆ ಓದುಗರ ಸಂಖ್ಯೆ ಹೆಚ್ಚಲಿದೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು
71.50 ಕೋಟಿ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ
ಸ್ಥಾಪಿಸಿ ಓದುಗರಿಗೆ ಸಹಕರಿಸಿದ್ದರು” ಎಂದು ಪಟ್ಟಣ
ಪಂಚಾಯಿತಿ ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ
ನೆನಪಿಸಿದರು.
“ಪತ್ಯೇತರ ಪುಸ್ತಕಗಳ ಓದು ಮಕ್ಕಳಿಗೆ ಅಮೂಲ್ಯವಾದ
ವಿಷಯಗಳನು ತಿಳಿಸುತ್ತದೆ’ ಎಂದು ಜಿಲ್ಲಾ ಕೇಂದ್ರ
ಗ್ರಂಥಾಲಯದ ಉಪ ನಿರ್ದೇಶಕಿ ನಳಿನಿ ಜಿ.ಐ.
ಹೇಳಿದರು.
ಸತತವಾಗಿ 15 ವರ್ಷಗಳಿಂದ ಪುಸ್ತಕ ಓದುತ್ತಾ ಬಂದಿರುವ ಗೀತಾ ಗೋವಿಂದರಾಜ್ ಅವರನ್ನು ಸನ್ಮಾನಿಸಿ ಹಾಗೂ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.














