ಇತ್ತೀಚಿನ ಸುದ್ದಿ
Law & Order | ಗೃಹ ಖಾತೆ ಬದುಕಿದೆಯಾ? ಪೊಲೀಸರನ್ನೇ ರಕ್ಷಣೆ ಮಾಡಲು ಮಿಲ್ಟ್ರಿ ತರುವ ಪರಿಸ್ಥಿತಿ ಇದೆ: ಮಾಜಿ ಹೋಮ್ ಮಿನಿಸ್ಟರ್ ಆರಗ ಜ್ಞಾನೇಂದ್ರ
22/03/2025, 21:09

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ರಾಜ್ಯದಲ್ಲಿ ಗೃಹ ಖಾತೆ ಬದುಕಿದೆಯಾ? ಎಂದು ಇತ್ತೀಚಿನ ದಿನಗಳಲ್ಲಿ ನೋಡಿದರೆ ನಮಗೆ ಅನಿಸುತ್ತಿದೆ. ಪೊಲೀಸರು ಸಂರಕ್ಷಣೆ ಮಾಡಬೇಕಿತ್ತು. ಈಗ ಪೊಲೀಸರನ್ನೇ ರಕ್ಷಣೆ ಮಾಡಲು ಮಿಲ್ಟ್ರಿ ತರುವ ಪರಿಸ್ಥಿತಿ ಆಗಿದೆ. ಅವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಮೈಸೂರಲ್ಲಿ ಐಪಿಎಸ್ ಅಧಿಕಾರಿಯ ವಾಹನ ಜಖಂ ಮಾಡಿದರು. ಒಂದು ಸಾವಿರ ಜನರ ಮೇಲೆ ಎಫ್ಐಆರ್ ಹಾಕಿ ಹದಿನೇಳು ಮಂದಿಯನ್ನು ಅರೆಸ್ಟ್ ಮಾಡಿದರೆ ಅವರನ್ನು ಅರೆಸ್ಟ್ ಮಾಡಬಾರದು ಎಂದು ಪೋಲೀಸರ ಮೇಲೆ ಒತ್ತಡ ಇತ್ತು. ಕೇಸ್ ದಾಖಲಿಸದ ಅಧಿಕಾರಿಯನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ. ಒಂದು ಸಮುದಾಯದ ಜನ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ ಎಂದರು.
ಶಾಂತಿ ಸುವ್ಯವಸ್ಥೆ ಹೋಗಿದೆ. ಆತ್ಮಹತ್ಯೆಗಳು ಎಷ್ಟಾಗಿದ್ದಾವೇ? ಸರ್ಕಾರಿ ನೌಕರರು ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಮರೀಚಿಕೆ ಆಗಿದೆ. ಮಾದಕ ವಸ್ತುಗಳು, ಸ್ಮಗ್ಲಿಂಗ್, ರಿಯಲ್ ಎಸ್ಟೇಟ್ ಈ ರೀತಿಯಲ್ಲಿ ಪೊಲೀಸರದ್ದೇ ಇನ್ವಾಲ್ ಮೆಂಟ್ ಇದೆ.
ಹೀಗಾಗಿ ಪೊಲೀಸರು ಪೊಲೀಸರಾಗಿ ಉಳಿದಿಲ್ಲ. ಕಳೆದ ಎರಡು ವರ್ಷಗಳಲ್ಲಿ ಇಲಾಖೆಯನ್ನು ಹಾಳು ಮಾಡಲಾಗಿದೆ ಎಂದರು.