11:40 AM Wednesday15 - January 2025
ಬ್ರೇಕಿಂಗ್ ನ್ಯೂಸ್
ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?: ರಾಜ್ಯ ಸರ್ಕಾರದ ವಿರುದ್ಧ…

ಇತ್ತೀಚಿನ ಸುದ್ದಿ

ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿ

01/09/2024, 20:52

ಮಂಗಳೂರು(reporter Karnataka.com): ಕೊಂಕಣಿ ಭಾಷೆಯ ಪ್ರಸಿದ್ಧ ಲೇಖಕಿಯಾಗಿರುವ ಲವಿ ಗಂಜಿಮಠ ರವರಿಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಹಾಗೂ ‘ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024’ ವನ್ನು ಬಜ್ಪೆ ಧರ್ಮ ಕೇಂದ್ರದ ಪತ್ರಿಕೆ ‘ಆಮ್ಚೆಂ ಶೆತ್’ ಎಂಬ ಪತ್ರಿಕೆಗೆ ಸೆಪ್ಟೆಂಬರ್ 1ರಂದು ನೀಡಿ ಗೌರವಿಸಲಾಯಿತು.

ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾಗಿರುವ ಅತಿ ವಂದನೀಯ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪ್ರಶಸ್ತಿ ಪ್ರದಾನ ಮಾಡಿದರು. ‘ರಾಕ್ಣೊ’ ವಾರಪತ್ರಿಕೆಯ ಸಂಪಾದಕರಾಗಿರುವ ವಂದನೀಯ ರೂಪೇಶ್ ಮಾಡ್ತಾ ಅವರು ಪ್ರಶಸ್ತಿಯ ಹಾಗೂ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು. ‘ಕೊಂಕಣಿ ಭಾಷೆಗೆ ಅದರದ್ದೇ ಆದ ದಿಗಂತವಿದೆ. ಈ ಭಾಷೆಗೆ ಬೆಳೆಯಲು ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ‘ರಾಕ್ಣೊ’ ಪತ್ರಿಕೆಗೆ ಸಹಕಾರ ಕೋರುತ್ತೇನೆ. ಪ್ರಶಸ್ತಿ ವಿಜೇತರಿಗೆ ಮತ್ತು ಎಲ್ಲಾ ಸಾಹಿತಿಗಳಿಗೆ ಅಭಿನಂದಿಸುತ್ತೇನೆ ‘ ಎಂದು ಬಿಷಪ್ ಆಶೀರ್ವಚನ ನೀಡಿದರು.
ಡಾ. ಎಡ್ವರ್ಡ್ ನಜ್ರೆತ್ ರವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿಕೊಟ್ಟರು. ನಂತರ ನಡೆದ ಕೊಂಕಣಿ ಲೇಖಕರ ಸಮಾವೇಶದಲ್ಲಿ ಪ್ರಸಿದ್ಧ ಕೊಂಕಣಿ ಕವಿ ಆಂಡ್ರ್ಯೂ ಎಲ್ ಡಿಕೂನ್ಹಾರವರು ಕವಿತೆ ಮತ್ತು ಕಾವ್ಯಾತ್ಮಕ ಬದುಕು ಎಂಬ ಬಗ್ಗೆ, ಲವೀ ಗಂಜಿಮಠರವರು ಪತ್ರಿಕೆಯನ್ನು ಸಂಪಾದಸುವ ಬಗ್ಗೆ ಹಾಗೂ ‘ ನಮಾನ್ ಬಾಳಕ್ ಜೆಜು’ ಪತ್ರಿಕೆಯ ಸಂಪಾದಕರಾಗಿರುವ ವಂದನೀಯ ಐವನ್ ಡಿಸೋಜ಼ರವರು ಓದುಗರ ಪತ್ರವನ್ನು ಬರೆಯುವ ಬಗ್ಗೆ ವಿವರಿಸಿದರು. ನಂತರ ವಂದನೀಯ ರೂಪೇಶ್ ಮಾಡ್ತಾರವರು ಸಂವಾದವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸಂಪಾದಕ ಮಂಡಳಿಯ ಸದಸ್ಯರಾಗಿರುವ ಫ್ರಾನ್ಸಿಸ್ ಡಿ ಕೂನ್ಹಾರವರು ನಿರ್ವಹಿಸಿದರು. ಸಂಪಾದಕ ಮಂಡಳಿಯ ಸದಸ್ಯರಾಗಿರುವ ಪ್ರಮೋದ್ ಹೊಸ್ಪೆಟ್ , ಡಾ. ಎಡ್ವರ್ಡ್ ನಜ್ರೆತ್ ಹಾಗೂ ಲವೀ ಗಂಜಿಮಠ ಅವರು ಸಹಕರಿಸಿದರು. ಹಿರಿಯ ಸಾಹಿತಿಗಳಾದ ವಂದನೀಯ ಅಲ್ಫೋನ್ಸ್ ಡಿಲೀಮಾ, ಡಾಲ್ಫಿ ಕಾಸ್ಸಿಯ, ಎಚ್. ಆರ್. ಆಳ್ವ ಅಲ್ಲದೆ 70 ಹೆಸರಾಂತ ಬರಹಗಾರರು ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು