ಇತ್ತೀಚಿನ ಸುದ್ದಿ
ಕುತೂಹಲ ಮೂಡಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿ
13/07/2022, 14:32
ಬೆಂಗಳೂರು(Reporterkarnataka. com): ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರಿ ನಿವಾಸದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿ.ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದು, ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ. ಸದ್ಯ ಈ ಭೇಟಿ ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬಿಎಸ್ ವೈ ಭೇಟಿ ಬಳಿಕ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಈ ಭೇಟಿಯಲ್ಲಿ ಯಾವುದೇ ಕುತೂಹಲವಿಲ್ಲ. ಬೆಂಗಳೂರು ಬಂದಾಗ ಸಹಜವಾಗಿ ಭೇಟಿಯಾಗುತ್ತೇನೆ. ಯಡಿಯೂರಪ್ಪನವರು ಹಿರಿಯರು ಹಾಗೂ ಸಮಾಜದ ಮುಖಂಡರಾಗಿದ್ದಾರೆ. ಕೆಲವೊಂದು ವಿಚಾರದ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆದುಕೊಂಡಿದ್ದೇನೆ.ಅವರ ಅರ್ಶಿವಾದ ಪಡೆಯುವ ನಿಟ್ಟಿನಲ್ಲಿ ಭೇಟಿಯಾಗಿದ್ದೇನೆ ಎಂದು ಹೇಳಿದರು.