ಇತ್ತೀಚಿನ ಸುದ್ದಿ
ಕುಶಾಲನಗರ: ಮನೆ ಮುಂದಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಶ್ರೀಗಂಧ ಮರ ಕಳವು
06/07/2025, 21:42

ಮಡಿಕೇರಿ(reporterkarnataka.com): ಮನೆ ಮುಂದೆ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳರು ಕಡಿದು ಸಾಗಾಟ ಮಾಡಿರುವ ಘಟನೆ
ಕುಶಾಲನಗರದಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ರಂಗಸಮುದ್ರ ಗ್ರಾಮದಲ್ಲಿ ನಡೆದಿದೆ. ಈ ಶ್ರೀ ಗಂಧ ಮರವು ಅಲ್ಲಿನ ನಿವಾಸಿ ಮಾವಜಿ ದೇವಿಪ್ರಸಾದ್ ಎಂಬುವರಿಗೆ ಸೇರಿದ್ದು. 50 ಸಾವಿರ ರೂ. ಬೆಲೆಬಾಳುತ್ತದೆ ಎಂದು ಅಂದಾಜಿಸಲಾಗಿದೆ.