ಇತ್ತೀಚಿನ ಸುದ್ದಿ
ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ
21/08/2025, 13:12

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterKarnataka@ggmail.com
ಧರ್ಮಸ್ಥಳ ವಿರೋಧಿಗಳ ವಿರುದ್ದ ಹಿಂದೂ ವಿವಿಧ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿಯನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಪ್ರತಿಭಟನೆಯಲ್ಲಿ ದಿಕ್ಸುಚಿ ಭಾಷಣಕಾರರಾಗಿ ಪುನೀತ್ ಕೆರೇಹಳ್ಳಿ ಕುಶಾಲನಗರದಲ್ಲಿ ಪೊಲೀಸರು ವಶಕ್ಕೆ ಪಡೆಯಲು ಮುಂದಾಗಿದ್ದ ಸಂದರ್ಭ ಪೊಲೀಸರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರ ನಡುವೆ ತಳ್ಳಟ ನೂಕಾಟ ನಡೆದಿದ್ದು ಕೆಲಕಾಲ ದೊಡ್ಡ ಹೈ ಡ್ರಾಮಾವೇ ನಡೆದಿದ್ದು ಕಾರ್ಯಪ್ಪ ವೃತ್ತದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತೆ ಉಂಟಾಗಿತು.