ಇತ್ತೀಚಿನ ಸುದ್ದಿ
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ ಮುಳುಗಿ ಸಾವು
05/10/2025, 21:16

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmal.com
ಸಂಬಂಧಿಕರೊಬ್ಬರ ಸಾವಿಗೆ ತೆರಳಿ ಸ್ನೇಹಿತರೊಂದಿಗೆ ಹಾರಂಗಿ ಮುಖ್ಯನಾಲೆಯಲ್ಲಿ ಈಜಲು ತೆರಳಿದ್ದ ಯುವಕ ಮುಳುಗಿ ಮೃತಪಟ್ಟ ಘಟನೆ ಹುದುಗೂರು ಬಳಿ ನಡೆದಿದೆ.
ಕೂಡಿಗೆ ಬಸವರಾಜು ಎಂಬವರ ಪುತ್ರ ಸಂತೋಷ (28) ಮೃತ ದುರ್ದೈವಿ. ಕೂಡಿಗೆ ಹಾಲಿನ ಡೈರಿಯಲ್ಲಿ ಚಾಲಕನಗಿರುವ ಸಂತೋಷ್ ಅಂಗಡಿಗಳಿಗೆ ಹಾಲು ಸರಬರಾಜು ಕೆಲಸ ಮಾಡಿಕೊಂಡಿದ್ದ.ಮೃತದೇಹಕ್ಕಾಗಿ ಅಗ್ನಿ ಶಾಮಕ ದಳ ನಾಲೆ ಯಲ್ಲಿ ನೀರು ಹರಿವು ನಿಲ್ಲಿಸಿ ಶೋಧ ಕಾರ್ಯ ನಡೆಸಿದ್ದು ಅರ್ಧ ಕಿಲೋಮೀಟರು ದೂರದಲ್ಲಿ ಮೃತದೇಹ ಪತ್ತೆಯಾಗಿದೆ,ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.