ಇತ್ತೀಚಿನ ಸುದ್ದಿ
ಕುಂದಾಪುರ: ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಮುದೋಳದ ಯುವಕ ಆತ್ಮಹತ್ಯೆ
23/09/2022, 23:26
ಕುಂದಾಪುರ(reporterkarnataka.com): ಕುಂದಾಪುರದ ಶಾಸ್ತೀ ಪಾರ್ಕ್‌ನಲ್ಲಿರುವ ಶುಭಲಕ್ಷ್ಮೀ ಲಾಡ್ಜ್ ನಲ್ಲಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.22ರಂದು ನಡೆದಿದೆ.
ಮೃತನನ್ನು ಬಾಗಲಕೋಟೆ ಜಿಲ್ಲೆಯ ಮುದೋಳ ನಿವಾಸಿ ಸುಭಾಸ ಪಾಟೀಲ(20) ನೇಣಿಗೆ ಶರಣಾದ ವ್ಯಕ್ತಿ. ಈತ ಮುದ್ದೆಬಿಹಾಳದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಯಾವುದೋ ವಿಚಾರದಲ್ಲಿ ಬೇಸರಗೊಂಡು ಕೆಲಸ ಮಾಡುತ್ತಿದ್ದ ಮುದ್ದೆಬಿಹಾಳದಿಂದ ಸೆ.20ರಂದು ಕುಂದಾಪುರಕ್ಕೆ ಬಂದು ಲಾಡ್ಜ್ ನಲ್ಲಿ ತಂಗಿದ್ದನು. ಸೆ.22ರಂದು ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














