8:39 PM Sunday17 - August 2025
ಬ್ರೇಕಿಂಗ್ ನ್ಯೂಸ್
ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:…

ಇತ್ತೀಚಿನ ಸುದ್ದಿ

ಕುಕ್ಕುಟೋದ್ಯಮ ಕ್ಷೇತ್ರದ ಸಮಸ್ಯೆ ಪರಿಹಾರಕ್ಕೆ ಸಚಿವರ ಭರವಸೆ

03/08/2023, 20:26

ಬೆಂಗಳೂರು(reporterkarnataka.com): ರಾಜ್ಯದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರನ್ನು ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್(ಕೆಪಿಎಫ್‍ಬಿಎ)ನ ಪ್ರತಿನಿಧಿಗಳು ಭೇಟಿ ಮಾಡಿ, ರಾಜ್ಯದ ಕುಕ್ಕುಟೋದ್ಯಮ ಕ್ಷೇತ್ರದ ಸಮಸ್ಯೆಗಳ ಕುರಿತು ಮನವರಿಕೆ ಮಾಡಿದ್ದು, ಸಚಿವರು ಇದಕ್ಕೆ ಪೂರಕವಾಗಿ ಸ್ಪಂದಿಸುವ ಜತೆಗೆ ಸಮಸ್ಯೆ ಪರಿಹಾರಕ್ಕೆ ಭರವಸೆಯನ್ನು ನೀಡಿದರು.
ಕೆಪಿಎಫ್‍ಬಿಎ ಅಧ್ಯಕ್ಷ ಡಾ. ಸುಶಾಂತ್ ರೈ ನೇತೃತ್ವದ ನಿಯೋಗದಿಂದ ಕುಕ್ಕುಟೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು. ವಿದ್ಯುತ್ ದರ ಹೆಚ್ಚಳದಿಂದ ಕುಕ್ಕುಟೋದ್ಯಮಕ್ಕೆ ಹೊರೆಯಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ. ಅಷ್ಟೇ ಅಲ್ಲದೆ ಕೆಲವು ಕೋಳಿ ಘಟಕಗಳು ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿದೆ ಎಂದು ಸಚಿವರಿಗೆ ಮನವರಿಕೆ ಮಾಡಲಾಯಿತು.
ಡಾ. ಸುಶಾಂತ್ ರೈ ಅವರು ಸಂಘದ ಚಟುವಟಿಕೆಗಳು, ಅದರ ಅತ್ಯಾಧುನಿಕ ರೋಗ ನಿರ್ಣಯ ಪ್ರಯೋಗಾಲಯ ಮತ್ತು ತರಬೇತಿ ಕೇಂದ್ರ ಮತ್ತು ಕೋಳಿ ವಲಯವನ್ನು ಉತ್ತೇಜಿಸಲು ಸರಕಾರ ಮತ್ತು ಸದಸ್ಯರೊಂದಿಗೆ ಹೊಂದಿರುವ ಸಂಪರ್ಕದ ಬಗ್ಗೆ ತಿಳಿಸಿದರು.
ಕೆಪಿಎಫ್‍ಬಿಎ ಮಾಜಿ ಅಧ್ಯಕ್ಷ ಕೆ.ಎಸ್. ಅಶೋಕ್ ಕುಮಾರ್ ಅವರು ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ಕ್ಷೇತ್ರವು ಬೆಳೆದಿರುವ ಹಾಗೂ ಇನ್ನೂ ಹೆಚ್ಚಿನ ಬೆಳವಣಿಗೆಗೆ ಬೇಕಾದ ಸಾಮಾರ್ಥ್ಯವಿದ್ದು ಅದಕ್ಕೆ ಸಚಿವಾಲಯದ ಬೆಂಬಲ ಕೋರಿದರು. ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ಕೆಪಿಎಫ್‍ಬಿಎ ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸಿ, ಕೋಳಿ ಸಾಕಾಣೆದಾರರಿಗೆ ಪ್ರಯೋಜನವಾಗುವ ನಿರ್ಧಾರಕ್ಕೆ ಬೆಂಬಲಿಸುವುದಾಗಿ ಸಚಿವರು ತಿಳಿಸಿದರು. ಕೆಪಿಎಫ್‍ಬಿಎ ನಿಯೋಗ ಸಚಿವ ಕೆ.ವೆಂಕಟೇಶ್ ಅವರನ್ನು ಸನ್ಮಾನಿಸಿತು. ಈ ಸಂದರ್ಭ ಎಸ್.ಆರ್.ಆಗ್ರೋ ಫಾರ್ಮ್ಸ್‍ನ ರಾಜೇಶ್ ರೆಡ್ಡಿ ಮತ್ತು ಕೆಪಿಎಫ್‍ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು