ಇತ್ತೀಚಿನ ಸುದ್ದಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಝೀರ್ ಭೇಟಿ: ಆಶ್ಲೇಷ ಪೂಜೆ ಸಲ್ಲಿಕೆ
27/12/2021, 18:24
ಸುಬ್ರಹ್ಮಣ್ಯ(reporterkarnataka.com):
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜಸ್ಟಿಸ್ ಅಬ್ದುಲ್ ನಝೀರ್ ಅವರು ಕುಟುಂಬ ಸಮೇತರಾಗಿ ಬಂದು ಆಶ್ಲೇಷ ಬಲಿ ಪೂಜೆಯನ್ನು
ಸಲ್ಲಿಸಿದರು.
ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಡಿ.26ರ ರಾತ್ರಿ 8.10ಕ್ಕೆ ವಿಮಾನದ ಮೂಲಕ ಹೈದರಾಬಾದ್‌ನಿಂದ ಮಂಗಳೂರಿಗೆ ಆಗಮಿಸಿದ್ದರು. ನಂತರ ಅವರು ಕುಕ್ಕೆ ಸುಬ್ರಮಣ್ಯಕ್ಕೆ ತೆರಳಿ, ವಾಸ್ತವ್ಯ ಹೂಡಿದ್ದರು. 27ರಂದು ಕುಕ್ಕೆ ದೇಗುಲದಲ್ಲಿ ಆಶ್ಲೇಷ ಬಲಿ ಪೂಜೆ ಸಲ್ಲಿಸಿದರು.
ಡಿ.28ರ ಬೆಳಿಗ್ಗೆ 9 ಗಂಟೆಗೆ ನ್ಯಾಯಮೂರ್ತಿ ಅವರು
ಕುಕ್ಕೆ ಸುಬ್ರಮಣ್ಯದಿಂದ 10.30ಕ್ಕೆ ಪುತ್ತೂರಿಗೆ ಆಗಮಿಸಿ, 11 ಗಂಟೆಗೆ ಬಾರ್ ಅಸೋಸಿಯೇಷನ್‌ನ ಕಟ್ಟಡವನ್ನು ಉದ್ಘಾಟಿಸುವರು. ಅಲ್ಲಿನ ಕೋರ್ಟ್ ಕಟ್ಟಡದ ಎರಡನೇ ಹಂತದ ಕಟ್ಟಡ ಹಾಗೂ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 1.15ಕ್ಕೆ ಪುತ್ತೂರಿನಿಂದ ಹೊರಟು 2.15ಕ್ಕೆ ಸುಳ್ಯಕ್ಕೆ ಆಗಮಿಸುವರು. ಮಧ್ಯಾಹ್ನ 2.30ಕ್ಕೆ ಅಲ್ಲಿ ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4.45ಕ್ಕೆ ಬೆಳ್ತಂಗಡಿಗೆ ಆಗಮಿಸುವ ಅವರು ಅಲ್ಲಿ 5 ಗಂಟೆಗೆ ಬಾರ್ ಅಸೋಸಿಯೇಷನ್ ಕಟ್ಟಡವನ್ನು ಉದ್ಘಾಟಿಸುವರು. ಸಂಜೆ 6 ಗಂಟೆಗೆ ಬೆಳ್ತಂಗಡಿಯಿಂದ ನಿರ್ಗಮಿಸಿ ರಾತ್ರಿ 7.30ಕ್ಕೆ ಮೂಡುಬಿದ್ರಿಗೆ ಆಗಮಿಸಿ ಅವರು ಸ್ವಗೃಹದಲ್ಲಿ ವಾಸ್ತವ್ಯ ಮಾಡುವರು.
ಡಿ.29ರ ಬುಧವಾರ ಬೆಳಿಗ್ಗೆ 8 ಗಂಟೆಗೆ ಮೂಡಬಿದ್ರೆಯಿಂದ ನಿರ್ಗಮಿಸಿ 8.45ಕ್ಕೆ ಮಂಗಳೂರಿಗೆ ಆಗಮಿಸುವ ಅವರು ಬೆಳಿಗ್ಗೆ 9ಕ್ಕೆ ನ್ಯಾಯಾಂಗ ಇಲಾಖೆ ಅಧಿಕಾರಿಗಳ ಕ್ವಾರ್ಟಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. 11ಕ್ಕೆ ಬಂಟ್ವಾಳಕ್ಕೆ ಆಗಮಿಸುವ ಅವರು 11.15ಕ್ಕೆ ಬಂಟ್ವಾಳದಲ್ಲಿ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಗೃಹಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಅಲ್ಲಿಂದ ಅವರು 1.45ಕ್ಕೆ ಮೂಡಬಿದ್ರಿಗೆ ಆಗಮಿಸಿ ಅವರ ಸ್ವಗೃಹದಲ್ಲಿ ವಾಸ್ತವ್ಯ ಮಾಡುವರು.
ಡಿ.30ರ ಗುರುವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
2022ರ ಜನವರಿ 1ರ ಬೆಳಿಗ್ಗೆ 11.25ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು.