ಇತ್ತೀಚಿನ ಸುದ್ದಿ
ಕುದುರೆಮುಖ ಲೇಬರ್ ಕಾಲೋನಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಮನೆ ಸಂಪೂರ್ಣ ಜಖಂ
30/06/2022, 22:59
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುದುರೆಮುಖ ವಿನೋಭನಗರ ಲೇಬರ್ ಕಾಲೋನಿಯ ನಿವಾಸಿ ಲಕ್ಷ್ಮಮ್ಮ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದೆ.
ಗುರುವಾರ ಮದ್ಯಾಹ್ನ ಕುದುರೆಮುಖ ಲೇಬರ್ ಕಾಲೋನಿಯ ಲಕ್ಷಮ್ಮ ಸೀಬೆ ಹಣ್ಣು ಮಾರಲು ಹೋಗಿದ್ದರು.ಈ ಸಂದರ್ಭದಲ್ಲಿ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಗ್ಯಾಸ್ ಸ್ಫೋಟಗೊಂಡ ರಭಸಕ್ಕೆ ಮನೆ ಸಂಪೂರ್ಣ ಜಖಂಗೊಂಡಿದೆ.
ಸ್ಥಳಕ್ಕೆ ಕುದುರೆಮುಖ ಪೊಲೀಸರು ಭೇಟಿ ನೀಡಿದ್ದಾರೆ.