ಇತ್ತೀಚಿನ ಸುದ್ದಿ
ಕುದ್ರು ಡೆಸ್ಟಿನ್ ಹೋಟೆಲಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ: ವ್ಯವಸ್ಥೆ, ಸೌಲಭ್ಯ ಬಗ್ಗೆ ಮೆಚ್ಚುಗೆ
30/05/2022, 17:36
ಮಂಗಳೂರು(reporterkarnataka.com): ನಗರದ ಅಳಕೆಯಲ್ಲಿರುವ ಕುದ್ರು ಡೆಸ್ಟಿನ್ ಹೋಟೆಲಿಗೆ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭಾನುವಾರ ಭೇಟಿ ನೀಡಿ ಹೋಟೆಲಿನ ವ್ಯವಸ್ಥೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನವಾಗಿ ನಿರ್ಮಾಣಗೊಂಡ ಕುದ್ರು ಡೆಸ್ಟಿನ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಗೆ ಭೇಟಿ ನೀಡಿದ ಗೃಹ ಸಚಿವರು, ಅಲ್ಲಿನ ವ್ಯವಸ್ಥೆ ಹಾಗೂ ಸೌಲಭ್ಯಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಅತೀ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ತರುಣರು ಮುಂದಾಗಬೇಕು ಎಂದು ಶುಭ ಹಾರೈಸಿದರು.
ಶಾಸಕ ಡಿ. ವೇದವ್ಯಾಸ್ ಕಾಮತ್, ಕುದ್ರು ಡೆಸ್ಟಿನ್ ಮಾಲಕರಾದ ನಂದನ್ ಶೆಣೈ, ಸ್ಥಳೀಯ ಕಾರ್ಪೋರೇಟರ್ ಜಯಶ್ರೀ ಕುಡ್ವ, ಬಿಜೆಪಿ ಮಂಡಲ ಅಧ್ಯಕ್ಷ ವಿಜಯ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಮಂಗಲ್ಪಾಡಿ ನರೇಶ್ ಶೆಣೈ, ರಮೇಶ್ ಮಲ್ಯ, ದೇವಾನಂದ ಪೈ, ಮಾಜಿ ಉಪ ಮೇಯರ್ ರಾಜೇಂದ್ರ ಕುಮಾರ್, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ಶ್ರೀಕಾಂತ್ ಶೆಣೈ, ಜನಾರ್ದನ್ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.