6:25 PM Monday12 - May 2025
ಬ್ರೇಕಿಂಗ್ ನ್ಯೂಸ್
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ…

ಇತ್ತೀಚಿನ ಸುದ್ದಿ

ಕೂಡ್ಲಿಗಿ ಶ್ರೀಸೊಲ್ಲಮ್ಮಗುಡಿ ಸರಕಾರಿ ಶಾಲೆ ಮುಖ್ಯ ಶಿಕ್ಷಕಿಯ ಅನುಚಿತ ವರ್ತನೆ: ಪೋಷಕರಿಂದ ಆರೋಪ, ಪ್ರತಿಭಟನೆ

17/12/2021, 21:53

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಶ್ರೀಸೊಲ್ಲಮ್ಮಗುಡಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯ ಶಿಕ್ಷಕಿ ಜಿನಾಬಿ ಅವರು ಮಕ್ಕಳನ್ನು ಶಾಲಾ ಸಮವಸ್ತ್ರ ಧರಿಸಿಲ್ಲ ಎಂಬ ಒಂದೇ ಕಾರಣಕ್ಕೆ ಶಾಲೆಯಿಂದ ಹೊರನಿಲ್ಲಿಸಿ ದುರ್ನಡತೆಯಿಂದ ವರ್ತಿಸಿದ್ದಾರೆ ಹಾಗೂ ಪೋಷಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂದು ಪೋಷಕರು ಆರೋಪಿಸಿದ್ದಾರೆ.

ಶಾಲೆಯ ಕೆಲ ವಿದ್ಯಾರ್ಥಿಗಳ ಪೋಷಕರು ಸಾರ್ವಜನಿಕರು ಹಾಗೂ ಎಸ್ಡಿ ಎಮ್ಸಿ ಅಧ್ಯಕ್ಷರ ನೇತೃತ್ವದಲ್ಲಿ ಶಾಲಾವರಣದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಮುಖ್ಯ ಶಿಕ್ಷಕಿ ಶಾಲಾವಧಿಯಲ್ಲಿ ಶಾಲೆಗೆ ಹಾಜರಾಗೋದಿಲ್ಲ. ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ ಮತ್ತು ಪೋಷಕರೊಂದಿಗೆ ಅನಗತ್ಯ ಉದ್ಧಟನದಿಂದ ವರ್ತಿಸುತ್ತಿದ್ದಾರೆಂದು ಕೆಲ ವಿದ್ಯಾರ್ಥಿಗಳ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ತಾನು ಭಾರೀ ಪ್ರಭಾವಿ ರಾಜಕೀಯದವರ ಬೆಂಬಲ ಉಳ್ಳವಳಾಗಿದ್ದು, ನಾನಿರೋದೆ ಹಾಗೇ ನನ್ನಿಷ್ಟದಂತೆ ನಾನಿರುವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಸಂಬಂಧಿಸಿದಂತೆ ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಬಿಇಓ ಅಲ್ಲ ಯಾವ ಶಿಕ್ಷಣಾಧಿಕಾರಿ ಯಾವ ಎಸ್ಡಿಎಮ್ಸಿಯವರು ಏನೂ ಮಾಡೋಕಾಗಲ್ಲ ಎಂಬಿತ್ಯಾದಿಯಾಗಿ, ಈ ಶಿಕ್ಷಕಿ ಬಹು ಅಶಿಸ್ತಿನಿಂದ ಶಾಲಾವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ತಮ್ಮೊಂದಿಗೆ ವರ್ತಿಸುತ್ತಿದ್ದಾರೆಂದು ಕೆಲ ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. ಈ ಸಂಬಂಧಿಸಿದಂತೆ ಕೆಲ ಸಾರ್ವಜನಿಕರು ಮಾತನಾಡಿದ್ದು, ಮುಖ್ಯ ಶಿಕ್ಷಕರು  ಈ ಶಾಲೆಗೆ ಬಂದಾಗಿನಿಂದ ಶಾಲಾ ವಾತಾವರಣ ತುಂಬಾ ಹದಗೆಟ್ಟಿದೆ, ಶಿಸ್ತನ್ನು ಪರಿಪಾಲಿಸಬೇಕಾಗಿರುವ ಶಿಕ್ಷಕರೇ ಹೀಗೆ ಅಶಿಸ್ಥಿನಿಂದ ವರ್ತಿಸುತ್ತಿದ್ದಾರೆ ಎಂದು ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ.

ಮುಖ್ಯ ಶಿಕ್ಷಕರ ಉದ್ಧಟತನದಿಂದಾಗಿ ಹಾಗೂ ಅವರ ಅಶಿಸ್ತಿನ ವರ್ತನೆಯ  ಪರಿಣಾಮ, ಶಾಲೆಯ ಸ್ಥಿತಿಗತಿ ಅಧೋಗತಿ ತಲುಪಿದೆ. ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಕೆಲ ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ. ಈ ಅಶಿಸ್ಥಿನ ಮುಖ್ಯ ಶಿಕ್ಷಕಿಯಿಂದಾಗಿ ಶಾಲೆ ದುಸ್ಥಿತಿಗೆ ಈಡಾಗಲಿದ್ದು,ಹೀಗೆ ಮುಂದುವರೆದಲ್ಲಿ ಶಾಲೆ ಮುಚ್ಚುವಂತಹ ದುಸ್ಥಿತಿ ನಿರ್ಮಾಣವಾಗಬಹುದೆಂಬ ಆತಂಕ ತಮ್ಮನ್ನು ಕಾಡುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ವಿದ್ಯಾರ್ಥಿಗಳ ಪೋಷಕರು ಹಾಗೂ ಕೆಲ ಎಸ್ಡಿ ಎಮ್ಸಿ ಸದಸ್ಯರು, ಸಾರ್ವಜನಿಕರು ಕೆಲ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತಿರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು