ಇತ್ತೀಚಿನ ಸುದ್ದಿ
ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ವೈಯಕ್ತಿಕ ಆ(ನಾ)ಚಾರಕ್ಕೆ ಸರಕಾರಿ ವಾಹನ ದುರ್ಬಳಕೆ: ಕ್ರಮಕ್ಕೆ ಆಗ್ರಹ
18/11/2022, 12:33

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ, ತಾಲೂಕಿನಲ್ಲೆಡೆಗಳಲ್ಲಿ ಸರ್ಕಾರಿ ವಾಹನಗಳ ಬಳಕೆಗೆ ಸಂಬಂಧಿಸಿದಂತೆ ಕೆಲ ಇಲಾಖೆಗಳ ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿಯಿಂದ , ಸರ್ಕಾರ ವಿಧಿಸಿರುವ ನಿಯಮಗಳನ್ನು ಗಾಳಿಗೆ ತೂರಿ ಬಳಕೆಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತಹ ಪ್ರತ್ಯಕ್ಷ ಸಾಕ್ಷ್ಯಾಧಾರಗಳು ಪುರಾವೆಗಳು ಮಾಧ್ಯಮಕ್ಕೆ, ಕೆಲ ಸಂಘಟನಾಕಾರರು ಹೋರಾಟಗಾರರು ನೀಡಿ ದೂರುನೀಡಿದ್ದಾರೆ.
ಇದು ಕಾನೂನು ಭಾಹೀರವಾಗಿದ್ದು ಅಧಿಕಾರಿಗಳೇ ಈತರದ ಲೋಪವನ್ನು ಎಸಗುತ್ತಿದ್ದಾರೆ, ಕೆಲ ಇಲಾಖೆಗಳ ವಾಹನ ಚಾಲಕರು ತಮ್ಮ ನಿತ್ಯ ವೈಯಕ್ತಿಕ ಚಟುವಟಿಕೆಗಳಿಗೆ, ಹಾಗೂ ಸ್ವಂತ ಬಳಕೆಗೆ ಸರ್ಕಾರಿ ವಾಹನ ಬಳಕೆ ಮಾಡುತ್ತಿದ್ದಾರೆಂದು ಪ್ರಜ್ಞಾವಂತ ಹೋರಾಟಗಾರರು
ಆರೋಪಿಸಿದ್ದಾರೆ. ವರದಿಯಲ್ಲಿ ಪ್ರಸ್ತಾಪಿಸಿರುವ ವೀಡಿಯೋ ಫೋಟೋದಲ್ಲಿರುವ, ಕರ್ನಾಟಕ ಸರ್ಕಾರ ಎಂಬ ನಾಮಫಲಕ ಹೊಂದಿರುವ ಬೊಲೇರೋವಾಹನ, ನ16ರಂದು ರಾತ್ರಿ 8ಗಂಟೆ ಸಮಯದಲ್ಲಿ. ಕೂಡ್ಲಿಗಿ ಪಟ್ಟಣದ ಶ್ರೀವೆಂಕಟೇಶ್ವರ ದೇವಸ್ಥಾನ ರಸ್ತೆಯಲ್ಲಿರುವ, ಖಾಸಗೀ ವ್ಯಾಪಾರ ಮಳಗಿ ಮುಂದೆ ಸುಮಾರು 20 ನಿಮಿಷಗಳ ಕಾಲ ನಿಂತಿತ್ತು. ಈ ಸರ್ಕಾರಿ ವಾಹನದಲ್ಲಿ ಮುಂದಿನ ಎಡಬದಿಯ ಸೀಟಿನಲ್ಲಿ, ಸಂಬಂಧಿಸಿದ ಇಲಾಖಾಧಿಕಾರಿ ಇದ್ದರೆನ್ನಲಾಗಿದೆ. ವಾಹನ ಚಾಲಾಯಿಸುತ್ತಿದ್ದವನು ಅದೇ ವಾಹನ ಚಾಲಕನೋ ಅಲ್ಲವೋ.!? ಎಂಬ ಅನುಮಾನದ ರೀತಿಯಲ್ಲಿದ್ದ, ಸಮವಸ್ತ್ರವಿದ್ದಿಲ್ಲ. ಆತನು ವಾಹನ ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ನಿಲ್ಲಿಸಿ ಅಧಿಕಾರಿಯನ್ನು, ವಾಹನದಲ್ಲಿಯೇ ಕೂರಿಸಿ ತಾನು ವ್ಯಾಪಾರ ಮಳಿಗೆ ಹತ್ರ ಹೋಗಿದ್ದಾನೆ. 20ನಿಮಿಷಗಳ ತರುವಾಯ ಮರಳಿ ಬಂದು ವಾಹನ ಚಲಾಯಿಸಿಕೊಂಡು ಹೊಂದಿರುಗಿದ್ದಾನೆ ಎಂದು, ನೆರೆದ ಪ್ರತ್ಯಕ್ಷ ದರ್ಶಿಗಳು ಹಾಗೂ ನಾಗರೀಕರು ತಿಳಿಸಿದ್ದಾರೆ. ಇದು ಉದಾಹರಣೆ ಮಾತ್ರ ಕೂಡ್ಲಿಗಿ ತಾಲೂಕಿನ ಕೆಲ ಇಲಾಖಾಧಿಕಾರಿಗಳು,ಹಾಗೂ ಕೆಲ ಇಲಾಖೆಗಳ ವಾಹನ ಚಾಲಕ ಸಿಬ್ಬಂದಿ ತುರ್ತು ನೆಪವೊಡ್ಡಿ. ನಿರಂತರವಾಗಿ ಸರ್ಕಾರಿ ವಾಹನಗಳನ್ನ, ತಮ್ಮ ಸ್ವಂತ ವಾಹನದ ರೀತಿಯಲ್ಲಿ ವೈಯಕ್ತಿ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲ ಸರ್ಕಾರಿ ಇಲಖೆಗಳ ವಾಹನ ಚಾಲಕರು, ವಾಹನ ಬಿಡಲು ಕಚೇರಿಯಲ್ಲಿ ಬಿಡಲು ಸುವ್ಯವಸ್ಥೆ ಇದ್ದರೂ ಕೂಡ. ವಾಹನವನ್ನು ತಮ್ಮ ಸ್ವಂತದ್ದೇ ಅನ್ನೋರೀತಿಯಲ್ಲಿ ತಮ್ಮ ಖಾಸಗೀ ಸ್ಥಳಗಳಲ್ಲಿ , ಹಾಗೂ ಸಂಬಂಧಿಕರ ಮನೆ ಆಂಗಳದಲ್ಲಿರಿಸುತ್ತಾರೆ ಎಂದು ಹಿರಿಯ ನಾಗರೀಕರು ದೂರಿದ್ದಾರೆ. ಪ್ರತಿದಿನ ಮುಂಜಾನೆಯಿಂದ ಸಂಜೆ ಅಷ್ಟೇ ಅಲ್ಲ, ಮದ್ಯರಾತ್ರಿಯವರೆಗೂ ಬಿಡದೇ ತಮ್ಮ ಸ್ವಂತ ವಾಹನದ ರೀತಿಯಲ್ಲಿ. ಸರ್ಕಾರಿ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ, ಗುತ್ತಿಗೆ ಆಧಾರದ ಮೇರೆಗೆ ಬಾಡಿಗೆ ಯಾಗಿ ಇಲಾಖೆಗೆ ನೀಡಿರುವ, ಕೆಲ ವಾಹನ ಮಾಲೀಕರು ಸರ್ಕಾರ ವಿಧಿಸಿರುವ ನಿಬಂಧನೆಗಳನ್ನು ಪಾಲಿಸುತ್ತಿಲ್ಲ.
ಕಚೇರಿಯ ನಿಗಧಿತ ಸಮಯದ ನಂತರ, ಮತ್ತು ರಜಾದಿನಗಳಲ್ಲಿ ಕರ್ನಾಟಕ ಸರ್ಕಾರ ಸೇವೆಯಲ್ಲಿ ಎಂಬ ನಾಮಫಲಕ ಇರೋ ವಾಹನವನ್ನು. ಕರ್ನಾಟಕ ಸರ್ಕಾರ ಎಂಬ ನಾಮಫಲಕ ಇರೋ ಸರ್ಕಾರಿ ವಾಹನ್ನು, ಕೆಲ ಅಧಿಕಾರಿಗಳು ಹಾಗೂ ಕೆಲ ಸಿಬ್ಬಂದಿ ತಮ್ಮ ವೈಯಕ್ತಿ ಕೆಲ ಕಾರ್ಯಗಳಿಗೆ ಮತ್ತು ಇತರೆ ಖಾಸಗೀ ಕಾರ್ಯಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ, ಅಸಹಾಯಕತನದಿಂದ ಆರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.
ಕೆಲ ವಾಹನ ಚಾಲಕರನ್ನು ವಿಚಾರಿಸಿದರೆ ಅಧಿಕಾರಿಗಳ ಕಡೆ ಬೆಟ್ಟು ಮಾಡುತ್ತಿದ್ದಾರೆ, ಇದರಿಂದಾಗಿ ಆಟೋಗಳಿಗೆ ಹಾಗು ರಿಕ್ಷಾದವರಿಗೆ ಮತ್ತು ಟ್ಯಾಕ್ಸಿಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ, ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸದಿರುವ ಕರ್ನಾಟಕ ಸರ್ಕಾರದ ಸೇವೆಯಲ್ಲಿರುವ ಬಾಡಿಗೆ ವಾಹನಗಳನ್ನು ರದ್ದುಗೊಳಿಸಬೇಕು, ಮತ್ತು ಕರ್ನಾಟಕ ಸರ್ಕಾರ ನಾಮಫಲಕ ಇರೋ ವಾಹನ ಕರ್ಥವ್ಯದ ಅವಧಿಯ ನಂತರ. ಆಯಾ ಇಲಾಖಾ ಕಚೇರಿಯಲ್ಲಿರುವ ಸೂಕ್ತ ಸ್ಥಳದಲ್ಲಿರಿಸುವಂತೆ ಕ್ರಮ, ಸರ್ಕಾರಿ ವಾಹನ ದುರ್ಭಳಕೆ ಮಾಡಿಕೊಳ್ಳುವ ಮತ್ತು ಅದಕ್ಕೆ ಸಹಕರಿಸಿರುವ ಅಧಿಕಾರಿ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ಥು ಕ್ರಮಕ್ಕೆ ಕೈಗೊಳ್ಳಬೇಕಿದೆ. ಈ ಮೂಲಕ ಸರ್ಕಾರಿ ವಾಹನ ದುರ್ಭಳಕೆ ನಿಲ್ಲಲೇ ಬೇಕು, ಅದಕ್ಕಾಗಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಕಾರ್ಮಿಕ ಹಾಗೂ ವಾಹನ ಚಾಲಕರ ಸಂಘ ಕೋರಿದೆ.
ಸರ್ಕಾರಿ ವಹನ ದುರ್ಭಳಕೆ ಪ್ರಮಾದಗಳನ್ನು ಪತ್ತೆ ಹಚ್ಚಿ ದೂರನ್ನಿತ್ತಾಗ ಸಂಬಂಧಿಸಿದ ಉನ್ನತಾಧಿಕಾರಿ ತ್ವರಿತಗತಿಯಲ್ಲಿ ವಿಚಾರಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲೇಬೇಕಾಗಿದೆ. ನಿರ್ಲಕ್ಷ್ಯ ತೋರಿದ್ದಲ್ಲಿ ಅವರೂ ಕೂಡ ಅಸಹಾಯಕರೆಂದು ತಾವೇ ಸಾಬೀತು ಮಾಡಿಕೊಂಡಂತಾಗುತ್ತದೆ ಆಗ ಅನಿವಾರ್ಯವಾಗಿ ಮೀಡಿಯಾದವರಲ್ಲಿ ದೂರು ನೀಡಬೇಕಾಗುತ್ತದೆ ಎಂದು ಹಿರಿಯನಾಗರೀಕರು, ಆಟೋ ಚಾಲಕರ ಸಂಘ ಸೇರಿದಂತೆ ಕೆಲ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.