11:21 PM Monday12 - May 2025
ಬ್ರೇಕಿಂಗ್ ನ್ಯೂಸ್
ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ನಾಯಿ ಕಚ್ಚಿದರೆ ಸರಕಾರಿ ಆಸ್ಪತ್ರೆಯಲ್ಲಿ ಇಲ್ಲ ಇಂಜೆಕ್ಷನ್ !: ಹೊಣೆಗೇಡಿ ಆರೋಗ್ಯಾಧಿಕಾರಿ

10/12/2021, 14:38

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ 

info.reporterkarnataka@gmail.com 

ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ,ಡಿ. 9ರಂದು ರಾತ್ರಿ  ಡಿ.ನಾಗರಾಜ ಎಂಬ ವ್ಯಕ್ತಿಯೋರ್ವರಿಗೆ ನಾಯಿ ಕಚ್ಚಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಧಾವಿಸಿದ ಅವರು ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ನೀಡುವ ಇಂಜಕ್ಷನ್ ಲಭ್ಯವಿಲ್ಲದೆ ಪರದಾಡಿದ ಘಟನೆ ನಡೆದಿದೆ.


ಈ ಕುರಿತು ಡಿ. ನಾಗರಾಜ ಎಂಬವರು ದೂರಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಯಿ ಕಡಿತಕ್ಕೆ ಲಸಿಕೆ ಇಲ್ಲದೆ ಸೂಕ್ತ ಚಿಕಿತ್ಸೆ ಸಿಗದೇ ಗಾಯಾಳು ಡಿ.ನಾಗರಾಜ ತೀವ್ರ ಪರದಾಡಿದ್ದಾರೆ. ಅವರು ಮಾತನಾಡಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ರೋಗಿಗಳನ್ನು ಗಮನಿಸುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳುತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಣೆಗೇಡಿ ಆರೋಗ್ಯಾಧಿಕಾರಿ ಹಾಗೂ ಪಪಂ ಅಧಿಕಾರಿ: ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ ಅಗತ್ಯ ಲಸಿಕೆಗಳು ಅಲಭ್ಯವಾಗಿದ್ದು ಹೆಸರಿಗಷ್ಟೇ ಸಾರ್ವಜನಿಕ ಆಸ್ಪತ್ರೆ ಎನಿಸಿದೆ. ಈ ಮೂಲಕ ಆರೋಗ್ಯಾಧಿಕಾರಿ ತಮ್ಮ ಹೊಣೆಗೆಡಿತನಕ್ಕೆ ಸಾಕ್ಷಿಯಾಗಿದ್ದಾರೆ. ಪಟ್ಟಣದಲ್ಲಿ ನಿರಂತರ ಬೀದಿನಾಯಿಗಳ ಹಾವಳಿ ಮತ್ತು ದಾಳಿ ಜರುಗುತ್ತಿದ್ದು,ಪಪಂ ಅಧಿಕಾರಿ ಸೂಕ್ತ ಕ್ರಮ ಜರುಗಿಸದೇ ತಮ್ಮ ಹೊಣೆಗೇಡಿತನವನ್ನು ಪ್ರದರ್ಶಿಸಿದ್ದಾರೆ. ಈ ಎರಡೂ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಸರ್ಕಾರಿ ಸಂಬಳ ತಿಂದು ಸಾರ್ವಜನಿಕರ ನೋವಿಗೆ ಸ್ಪಂದಿಸುತ್ತಿಲ್ಲ. ಈ ಮೂಲಕ ಹೊಣೆಗೇಡಿತನದ ಅಧಿಕಾರಿಗಳಾಗಿದ್ದಾರೆಂದು ಪಟ್ಟಣದ ನಾಗರೀಕರು ಕೆಲ ಸಂಘಟನೆಗಳ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಸಿದ್ದಾರೆ. ನಾಯಿ ಹಾಗೂ ಹಾವು ಕಡಿತಕ್ಕೆ ಲಸಿಕೆಗಳಿಲ್ಲ, ಸಿಬ್ಬಂದಿ ರೋಗಿಗಳಿಗೆ ಸಕಾಲಕ್ಕೆ ಸೂಕ್ತ ವಾಗಿ ಚಿಕಿತ್ಸೆ ನೀಡುತ್ತಿಲ್ಲ. ಲಕ್ಷಗಟ್ಟಲೆ ಸರ್ಕಾರಿ ಸಂಬಳ ತಿನ್ನೋ ಕೆಲ ವೈದ್ಯರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ಬದಲ‍‍ಾಗಿ ಗುಂಪುಗಾರಿಕೆ ಮತ್ತು ರಾಜಕೀಯ ಮಾಡುತ್ತಾ, ಕೇವಲ ಪ್ರಭಾವಿಗಳ ಜೀತದಾಳಿನಂತೆ ವರ್ತಿಸುತ್ತಿದ್ದಾರೆಂದು ಅವರು ಆಕ್ರೋಶ ವ್ಯಕ್ತಪಡಸಿದ್ದಾರೆ. ಪ್ರತಿಯೊಂದು ಚಿಕಿತ್ಸೆಯ  ಸಾಮ‍ಾಗ್ರಿಗಳನ್ನು ಹೊರಗಡೆ ತರಿಸುತ್ತಿದ್ದಾರೆ. ಮಾತೆತ್ತಿದರೆ ಬಳ್ಳಾರಿ, ದಾವಣಗೆರೆಗೆ ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಸಿಬ್ಬಂದಿ ಸಕಾಲಕ್ಕೆ ರೋಗಿಗಳಿಗೆ ನೀಡುತ್ತಿಲ್ಲ. ಎಲ್ಲದಕ್ಕೂ ಬಳ್ಳಾರಿಗೆ ಕಳುಹಿಸುವ ಇವರು, ಇಲ್ಲಿ ಏಕೆ ಇರಬೇಕು ಎಂದು ನಾಗರಾಜ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರೆಶ್ನಸಿದ್ದಾರೆ.  ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಬೇಕು: ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳು, ಕೆಲವು ಸಿಬ್ಬಂದಿಗಳು ಹತ್ತಾರು ವರ್ಷಗಳಿಂದ  ತಮ್ಮ ಬೇರು ಬಿಟ್ಟಿದ್ದಾರೆ,ಕಾರಣ ಜಿಲ್ಲಾಧಿಕಾರಿಗಳು ಪರಿಶೀಲಸಿ ಜನಹಿತಕ್ಕಾಗಿ ಸೂಕ್ತ ಕ್ರಮ ಜರುಗಿಸಬೇಕಿದೆ ಎಂದು ಹಲವು ಸಂಘಟನೆಗಳ ಪದಾಧಿಕಾರಿಗಳು, ನಾಗರೀಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು