ಇತ್ತೀಚಿನ ಸುದ್ದಿ
ಕೂಡ್ಲಗಿ: ಬೆಸ್ಕಾ ಜನರಲ್ ಮ್ಯಾನೇಜರ್ ನಾಗರಾಜ್ ಅವರ ಮನೆ, ಶಿಕ್ಷಣ ಸಂಸ್ಥೆ, ಪೆಟ್ರೋಲ್ ಬಂಕ್ ಮೇಲೆ ಲೋಕಾಯುಕ್ತ ದಾಳಿ
10/01/2024, 09:34
ವಿ.ಜಿ.ವೃಷಭೇಂದ್ರ ಕೂಡ್ಲಗಿ ವಿಜಯನಗರ
info.reporterkarnataka@gmail.com
ಬೆಸ್ಕಾ ಜನರಲ್ ಮ್ಯಾನೇಜರ್ ನಾಗರಾಜ್ ಅವರ ಕೂಡ್ಲಗಿ ಪಟ್ಟಣದ ಬಾಪೂಜಿ ನಗರದ ಬಸವೇಶ್ವರ ದೇಗುಲ ಹಿಂಭಾಗದಲ್ಲಿರೋ ಮನೆ ಹಾಗೂ ಅವರಿಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆ ಮತ್ತು ಪೆಟ್ರೋಲ್ ಬಂಕ್ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಬೆಸ್ಕಾಂ ಮ್ಯಾನೇಜರ್ ಅವರ ಪತ್ನಿ ಕರೆದುಕೊಂದು ಶಿಕ್ಷಣ ಸಂಸ್ಥೆಗೆ ಅಧಿಕಾರಿಗಳು ತೆರಳಿದ್ದಾರೆ. ನಾಗರಾಜ್ ಪತ್ನಿ ಸಮ್ಮುಖದಲ್ಲಿ ಬಿಎಡ್ ಕಾಲೇಜಿನಲ್ಲಿ ಪರಿಶೀಲನೆ ನಾಗರಾಜ್ ಗೆ ಸಂಬಂಧಿಸಿದ ಬಿಎಡ್ ಕಾಲೇಜ್, ಡಿಇಡಿ ಕಾಲೇಜು, ಐಟಿಐ ಕಾಲೇಜು,ಪಿಯು ಕಾಲೇಜ್ ಸೇರಿ ನಾಲ್ಕು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಕೂಡ್ಲಿಗಿ ತಾಲೂಕಿನಲ್ಲಿಯೇ ಎರಡು ಪೆಟ್ರೋಲ್ ಬಂಕ್ ನಾಗರಾಜ್ ಹೊಂದಿದ್ದಾರೆ.
ಗುಡೇಕೋಟೆ ಹೋಬಳಿಯಲ್ಲಿ ಒಂದು ಪೆಟ್ರೋಲ್ ಬಂಕ್ ಇದೆ.
ಕೂಡ್ಲಿಗಿಯಿಂದ 6 ಕಿಮೀ ದೂರದ ವಿರೂಪಾಪೂರ ಗ್ರಾಮದ ಬಳಿ ಒಂದು ಬಂಕ್ ನಾಗರಾಜ್ ಅವರಿಗಿದೆ.