10:35 PM Monday17 - November 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಕುಡ್ಲದ ಕುಂಟಿಕಾನ ಜಂಕ್ಷನ್ ನಲ್ಲಿ ನಿತ್ಯವೂ ಟ್ರಾಫಿಕ್ ಜಾಮ್!: ದುಡಿದು ಸುಸ್ತಾಗಿದ್ದ ಜನರಿಗೆ ತಲೆ ಸುತ್ತುಭರಿಸುವ ಕಿರಿಕಿರಿ!

01/06/2024, 21:04

ಮಂಗಳೂರು(reporterkarnataka.com): ಟ್ರಾಫಿಕ್ ಜಾಮ್ ಗೆ ಕಡಲನಗರಿ ಕುಡ್ಲ ಸಿಟಿ ತುಂಬಾ ಪ್ರಸಿದ್ದಿ. ಈ ಮೊದಲು ಮಂಗಳೂರಿನ ಹೃದಯಭಾಗದಲ್ಲಿ ಮಾತ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದರೆ, ಇದೀಗ ಹೊಟ್ಟೆಯ ಭಾಗದಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ ಸಾಲಿಗೆ ಕುಂಟಿಕಾನ ಜಂಕ್ಷನ್ ಕೂಡ ಸೇರಿದೆ.


ಎಜೆ ಆಸ್ಪತ್ರೆ ಸಮೀಪದ ಕುಂಟಿಕಾನ ಜಂಕ್ಷನ್ ಅಂದ್ರೆ ನಗರದ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಜಾಗ. ಇಲ್ಲಿ ಅಪಘಾತದ ಸಾಧ್ಯತೆ ಹೆಚ್ಚಾಗಿರುವುದರಿಂದ ಹೆದ್ದಾರಿಗೆ ಫ್ಲೈ ಓವರ್ ನಿರ್ಮಿಸಲಾಗಿದೆ. ಸಿಟಿ ಬಸ್ ಹಾಗೂ ಇತರ ವಾಹನಗಳು ಫ್ಲೈ ಓವರ್ ಕೆಳಗಡೆಯಿಂದ ಹಾದು ಹೋಗುತ್ತದೆ. ಆದರೆ ಫ್ಲೈ ಓವರ್ ಕೆಳಗಡೆ ಸಮರ್ಪಕವಾದ ಸರ್ವಿಸ್ ರಸ್ತೆ ಇಲ್ಲ. ತುಂಬಾ ಕಿರಿದಾದ ಕೊರಕಲಾದ ರಸ್ತೆ ಇದೆ.
ಸುಮಾರು 25 ವರ್ಷಗಳ ಹಿಂದೆ ಕುಂಟಿಕಾನ ಜಂಕ್ಷನ್ ಜನರಿಲ್ಲದೆ ಬಣಗುಟ್ಟುತ್ತಿತ್ತು. ಅಪರೂಪಕ್ಕೆ ಇಲ್ಲಿ ಸಿಟಿ ಬಸ್ ಗಳು ನಿಲ್ಲುತ್ತಿತ್ತು. ಯಾಕೆಂದರೆ, ಬಸ್ ಏರುವವರು, ಇಳಿಯುವವರು ಇರುತ್ತಿರಲಿಲ್ಲ. ಈಗ ಎಲ್ಲ ಬಸ್ ಗಳು ನಿಲ್ಲುತ್ತದೆ. ಎಜೆ ಆಸ್ಪತ್ರೆ ಬಂದ ಬಳಿಕ ಈ ಜಂಕ್ಷನ್ ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿದೆ. ಹೊಟೇಲ್ ಗಳು ಬಂದಿವೆ. ಜಂಕ್ಷನ್ ನಲ್ಲೇ ಶಿಕ್ಷಣ ಸಂಸ್ಥೆಯೊಂದು ಹೊಸತಾಗಿ ತಲೆ ಎತ್ತಿದೆ. ಇದರೊಂದಿಗೆ ಅನತಿ ದೂರದಲ್ಲಿ ಸೈಂಟ್ ಆ್ಯನ್ಸ್ ಶಾಲೆ ಇದೆ. ಪಕ್ಕದಲ್ಲೇ ಕೆಎಸ್ಸಾರ್ಟಿಸಿ ಡಿಪೋ, ಆಗ್ನಿಶಾಮಕ ದಳ ಕಚೇರಿ,
ಡಿ ಮಾರ್ಟ್, ಕಾರ್ ಶೋ ರೂಮ್ ಎಲ್ಲವೂ ಇದೆ. ಇವೆಲ್ಲದರ ಫಲಶ್ರುತಿ ಎಂಬಂತೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಒಂದಿಬ್ಬರು ಟ್ರಾಫಿಕ್ ಪೊಲೀಸರು ಕೂಡ ಇರುತ್ತಾರೆ. ಆದರೆ ಸಂಜೆ ವೇಳೆ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ. ಹಾಗೆ ಕೆಲವು ವಾಹನ ಚಾಲಕರ ಅವಸರ ಹಾಗೂ ರೂಲ್ಸ್ ಬ್ರೇಕ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ತಾಸುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶೀಘ್ರದಲ್ಲೇ ಮಂಗಳೂರು ಟ್ರಾಫಿಕ್ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು