ಇತ್ತೀಚಿನ ಸುದ್ದಿ
ಕೆ ಎಸ್ ಎಸ್ ಕಾಲೇಜು: International Taxation ಹಾಗೂ Double Taxation ಮಾಹಿತಿ ಕಾರ್ಯಾಗಾರ
19/03/2022, 00:09
ಸುಬ್ರಹ್ಮಣ್ಯ(reporterkarnataka.com):ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ ಘಟಕದಿಂದ ತೃತೀಯ ಬಿಕಾಂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಹಳೆ ವಿದ್ಯಾರ್ಥಿ ಲಕ್ಷ್ಮೀನಾರಾಯಣ ಹೊಳ್ಳ ಅವರು international taxation , double taxation Relief ಹಾಗೂ Anti avoidance measures ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಾಗಾರದಲ್ಲಿ ಪ್ರಾಂಶುಪಾಲ ಡಾ. ಗೋವಿಂದ ಎನ್. ಎಸ್. , ವಾಣಿಜ್ಯ ಹಾಗೂ ಉದ್ಯಮಾಡಳಿತ ಘಟಕದ ಮುಖ್ಯಸ್ಥರಾದ ಲತಾ ಬಿ.ಟಿ. ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶಿವಪ್ರಸಾದ್ ಅವರು ಉಪಸ್ಥಿತರಿದ್ದರು.