10:53 PM Friday15 - August 2025
ಬ್ರೇಕಿಂಗ್ ನ್ಯೂಸ್
‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ… ಬಸವಣ್ಣನವರ ಕಲ್ಯಾಣ ರಾಜ್ಯದ ಕನಸಿನ ಈಡೇರಿಕೆಯೇ ನಮ್ಮ ಗುರಿ: ಸಿಎಂ ಸಿದ್ದರಾಮಯ್ಯ ಕೇಂದ್ರದಿಂದ ಸ್ವಾತಂತ್ರ್ಯೋತ್ಸವದ ವಿಶಿಷ್ಠ ಕೊಡುಗೆ; ಉತ್ತರ ಕರ್ನಾಟಕಕ್ಕೆ ವಿಶೇಷ ಆರ್ಥಿಕ ವಲಯ ಘೋಷಣೆ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ; ಎಸ್ಐಟಿ ತನಿಖೆ ನಡೆಯುತ್ತಿರುವಾಗ ಸದನದಲ್ಲಿ ಪ್ರಸ್ತಾಪ ಸರಿಯಲ್ಲ:… ಜಾಮೀನು ರದ್ದು ಮಾಡಿದ ಸುಪ್ರೀಂಕೋರ್ಟ್: ನಟ ದರ್ಶನ್​​, ಪವಿತ್ರಾ ಗೌಡ ಸಹಿತ 4… ಕೇಂದ್ರದಿಂದ ರಸಗೊಬ್ಬರ ಪೂರೈಕೆ ಕೊರತೆ ರಾಜ್ಯದ ಸಮಸ್ಯೆಗೆ ಕಾರಣ: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ ರಾಜ್ಯ ಸರಕಾರದ ವಿನೂತನ ಯೋಜನೆ: ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೆ ಮಾಹಿತಿ ನೀಡಲು ಆ.… ಬಾಲ್ಯವಿವಾಹ ತಡೆಗಟ್ಟಲು ಸರ್ಕಾರದಿಂದ ಕಠಿಣ ಕ್ರಮ: ವಿಧಾನ ಸಭೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಇತ್ತೀಚಿನ ಸುದ್ದಿ

ಕೃಷ್ಣಾಪುರ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ 33ನೇ ಶಾಖೆ ಉದ್ಘಾಟನೆ

17/07/2024, 23:30

ಸಹಕಾರ ಕ್ಷೇತ್ರದಿಂದ ತಳಮಟ್ಟದ ಸೇವೆ: ಡಾ| ಎಂಎನ್‌ಆರ್

ಮಂಗಳೂರು(reporterkarnataka.com):

ರಾಷ್ಟ್ರೀಕೃತ ಬ್ಯಾಂಕ್‌ಗಳು ಒಂದಕ್ಕೊಂದು ವಿಲೀನಗೊಳ್ಳುತ್ತಿದ್ದರೆ, ಸಹಕಾರ ಕ್ಷೇತ್ರ ಕ್ಷಿಪ್ರವಾಗಿ ವಿಸ್ತರಣೆಗೊಳ್ಳುತ್ತಾ ಗ್ರಾಹಕರಿಗೆ ತಳಮಟ್ಟದಿಂದ ಉತ್ತಮ ಸೇವೆ ನೀಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಾಗೂ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಸುರತ್ಕಲ್ ಕೃಷ್ಣಾಪುರದ 6ನೇ ಬ್ಲಾಕ್‌ನಲ್ಲಿರುವ ಎಚ್‌ಎನ್‌ಜಿಸಿ ಐಕನ್ ಪ್ಲಾನೆಟ್ ಕಟ್ಟಡದಲ್ಲಿ ಸೋಮವಾರ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 33ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮಶಕ್ತಿ ಸಹಕಾರ ಸಂಘವು ಕ್ಷಿಪ್ರಗತಿಯಲ್ಲಿ 33 ಶಾಖೆಯವರೆಗೆ ವಿಸ್ತರಿಸಿರುವುದು ಅದರ ಗುಣಮಟ್ಟದ ಸೇವೆ ಹಾಗೂ ಗ್ರಾಹಕರ ವಿಶ್ವಾಸಗಳಿಸುರುವುದಕ್ಕೆ ಸಾಕ್ಷಿ ಎಂದರು.
ಸಂಸದ ಬ್ರಿಜೇಶ್ ಚೌಟ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸಂಸ್ಥೆಯು ಶೇ. 95ರಷ್ಟು ಮಹಿಳಾ ಸಿಬ್ಬಂದಿಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.
ಮಾಜಿ ಶಾಸಕರಾದ ಮೊಯ್ದೀನ್ ಬಾವಾ, ಮಾಜಿ ಮನಪಾ ಸದಸ್ಯರಾದ ತಿಲಕ್‌ರಾಜ್ ಕೃಷ್ಣಾಪುರ ಶುಭಹಾರೈಸಿದರು. ಡಾ| ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಸಮ್ಮಾನಿಸಲಾಯಿತು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷ್ಣಾಪುರದಲ್ಲಿ ಕಟ್ಟಡವನ್ನು ಖರೀದಿಸಿ, ಶಾಖೆಯನ್ನು ಆರಂಬಿಸಿದ್ದೇವೆ. ಡಾ| ರಾಜೇಂದ್ರ ಕುಮಾರ್ ರವರು ಬೆನ್ನೆಲುಬಾಗಿ ಸಂಸ್ಥೆಗೆ ಪ್ರೋತ್ಸಾಹ ನೀಡುತ್ತಾ ಬಂದಿರುವುದರಿಂದ ಸಂಘ ಯಶಸ್ಸು ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದರು.
ಭದ್ರತಾಕೋಶ , ಗಣಕೀಕೃತ ಬ್ಯಾಂಕಿಂಗ್, ನಿರಖು ಠೇವಣಿ ಪತ್ರ ಬಿಡುಗಡೆ, ಇ-ಮುದ್ರಾಂಕ ಸೇವೆಗೆ ಗಣ್ಯರು ಚಾಲನೆ ನೀಡಿದರಲ್ಲದೆ, ನೂತನ ಗ್ರಾಹಕರಿಗೆ ವಿವಿಧ ಸೇವಾ ದಾಖಲೆ ಪತ್ರವನ್ನು ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಲ್ಯೊಟ್ಟು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾದ ದೇವೇಂದ್ರ ಕೋಟ್ಯಾನ್ , ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯಾ ವಿಜಯ್, ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್., ರಮನಾಥ ಸನಿಲ್, ಚಂದ್ರಹಾಸ್ ಮರೋಳಿ, ಮುದ್ದು ಮೂಡುಬೆಳ್ಳೆ, ಗೋಪಾಲ್ ಎಂ., ಉಮಾವತಿ , ಸಲಹೆಗಾರರಾದ ಅಶೋಕ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.
*ನಿರಖು ಠೇವಣಿ ಮೇಲೆ ವಿಶೇಷ ಬಡ್ಡಿ:*
ಉದ್ಘಾಟನೆ ಪ್ರಯುಕ್ತ ನಿರಖು ಠೇವಣಿ ಮೇಲೆ ವಿಶೇಷ ಬಡ್ಡಿ, ಪ್ರತಿ ಗ್ರಾಂ ಗೆ ಗರಿಷ್ಟ ಚಿನ್ನಾಭರಣ ಸಾಲ, ಇ-ಮುದ್ರಾಂಕ ಸೇವೆ, ನೆಫ್ಟ್, ಆರ್‌ಟಿಜಿಎಸ್, ವಿಮಾ ಸೌಲಭ್ಯ ಮತ್ತಿತರ ಸೇವೆ ದೊರಕಲಿದೆ.
ಆರೋಗ್ಯ ತಪಾಸಣೆ ಶಿಬಿರ
ಶಾಖೆಯ ಉದ್ಘಾಟನೆಯ ಪ್ರಯುಕ್ತ ದೇರಳಕಟ್ಟೆಯ ಯೇನಪೊಯ ವಿವಿಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರದ ವೈದ್ಯರಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣೆ ಶಿಬಿರ, ಶ್ರೀನಿವಾಸ್ ಇನ್‌ಸ್ಟಿಟೂಟ್ ಆಪ್ ಡೆಂಟಲ್ ಸೈನ್ಸ್ ಮುಕ್ಕದ ವೈದ್ಯರಿಂದ ದಂತ ತಪಾಸಣೆ ನಡೆಯಿತು.
ಮನೋರಂಜನಾ ಕಾರ್ಯಕ್ರಮ
ಮನೋರಂಜನಾ ಕಾರ್ಯಕ್ರಮವು ಜಿಲ್ಲೆಯ ಪ್ರಖ್ಯಾತ ಕಲಾವಿದರಾದ ಹುಸೈನ್ ಕಾಟಿಪಳ್ಳ ಹಾಗೂ ತಂಡದಿಂದ ಜರುಗಿತು.

ಇತ್ತೀಚಿನ ಸುದ್ದಿ

ಜಾಹೀರಾತು