ಇತ್ತೀಚಿನ ಸುದ್ದಿ
ಕೃಷ್ಣ ಸಕ್ಕರೆ ಕಾರ್ಖಾನೆಯ 30ನೇ ವಾರ್ಷಿಕ ವರದಿ ಕಾರ್ಯಕ್ರಮ: ಆನ್ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ
23/09/2022, 21:20
ರಾಹುಲ್ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಕೃಷ್ಣ ಸಕ್ಕರೆ ಕಾರ್ಖಾನೆಯ 30ನೇ ವಾರ್ಷಿಕ ವರದಿ ಕಾರ್ಯಕ್ರಮವ ಆನ್ಲೈನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖಾಂತರ ಜರುಗಿತು.
ಈ ಕಾರ್ಯಕ್ರಮದಲ್ಲಿ ಸರ್ವ ಸದಸ್ಯರು ಆಡಳಿತ ಮಂಡಳಿಯೂ ಭಾಗವಹಿಸಿತ್ತು ಶೇರುದಾರರು ಕೇಳಿದ ಪ್ರಶ್ನೆಗಳಿಗೆ ಉತ್ತಮ ರಿತಿಯಲ್ಲಿ ಬೆಂಬಲ ನೀಡಿತು.
ಇದೆ ವೇಳೆ ಮಾತನಾಡಿದ ಕಾರ್ಖಾನೆ ಅಧ್ಯಕ್ಷರಾದ ಪರಪ್ಪ ಸವದಿ, ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ಕಾರ್ಖಾನೆಯೂ ಲಾಭದಾಯಕದಿಂದ ಕೂಡಿದ್ದು ಅದಕ್ಕೆಲ್ಲ ನಮ್ಮ ಕಾರ್ಖಾನೆಗೆ ಕಬ್ಬು ಕಳಿಸಿದ ರೈತರೇ ಕಾರಣ ಎಲ್ಲ ರೈತರಿಗೂ ಧನ್ಯವಾದ ತಿಳಿಸಿದರು ಮುಂಬರುವ ದಿನಗಳಲ್ಲಿ ಹಾಕಿರುವ ಎರಡು ನೂರು ರೂಪಾಯಿಗಳನ್ನು ಹಂತ ಹಂತವಾಗಿ ನೀಡಲಾಗುವುದು ನಮ್ಮ ಕಾರ್ಖಾನೆಯು ಮುಂಬರುವ ದಿನಗಳಲ್ಲಿ ಉತ್ತಮವಾದ ದರ ನೀಡಲಾಗುವುದು ಎಂದರು.














