ಇತ್ತೀಚಿನ ಸುದ್ದಿ
ಕೃಷಿ ವಿದ್ಯುತ್ ಸಂಪರ್ಕ ಕಡಿತ: ರೈತರ ವಿರೋಧ; ಮೂಡಿಗೆರೆ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಕೆ
24/01/2025, 16:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಿಲ್ ಪಾವತಿಸಿಲ್ಲದ ಕಾರಣಕ್ಕೆ ಕೃಷಿ ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ರೈತ ಮುಖಂಡರು ಮೂಡಿಗೆರೆ ಪಟ್ಟಣದ ಮೆಸ್ಕಾಂ ಕಚೇರಿಗೆ ಮನವಿ ಮಾಡಿದ್ದಾರೆ.
ಬಿಲ್ ಪಾವತಿಸಿಲ್ಲ ಅಂತಾ ಕಡಿತಗೊಳಿಸುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದಲ್ಲಿ 10 ಹೆಚ್ ಪಿಗೆ ಉಚಿತ ವಿದ್ಯುತ್ ನೀಡೋ ಭರವಸೆ ನೀಡಲಾಗಿತ್ತು. ಈಗ ವಿದ್ಯುತ್ ಕಡಿತಗೊಳಿಸುವುದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ.
10ರಿಂದ 15 ದಿನ ಬಳಸುವುದಕ್ಕೆ ವರ್ಷ ಪೂರ್ತಿ ಬಿಲ್ ನೀಡುತ್ತಿದೆ. ಕಾಫಿ ಗಿಡಗಳಿಗೆ ನೀರು ಹಾರಿಸುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಶೀಘ್ರ ರೈತರು ಹಾಗೂ ಜನಪ್ರತಿನಿಧಿಗಳ ಸಭೆಗೆ ರೈತರು
ಅಗ್ರಹಿಸಿದ್ದಾರೆ. ಮುಂದಿನ ದಿನದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.