ಇತ್ತೀಚಿನ ಸುದ್ದಿ
ಕ್ರೀಡೆ ದೈಹಿಕ ಸದೃಢತೆಗೆ ಸಹಕಾರಿ: ಬೆಸೆಂಟ್ ಸಂಧ್ಯಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ವಿ. ಜಿ. ಕಾಂತಿ
17/03/2022, 21:31
ಮಂಗಳೂರು(reporterkarnataka.com): ನಗರದ ಬೆಸೆಂಟ್ ಸಂಧ್ಯಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಬಂದರು ಠಾಣಾಧಿಕಾರಿ ವಿಜಿ ಕಾಂತಿ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಅಂಕಗಳಿಕೆ ಜೀವನದ ಭಾಗ. ಆದರೆ ದೈಹಿಕ ಮತ್ತು ಮಾನಸಿಕ ಸದೃಢತೆ ಕ್ರೀಡೆಗೆ ಸಹಕಾರಿಯಾಗುವುದು ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಮಣೇಲ್ ಅಣ್ಣಪ್ಪ ನಾಯಕ್ ವಹಿಸಿದ್ದರು. ಬೆಸೆಂಟ್ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ಉಪನ್ಯಾಸಕ ಗೋಪಾಲ ರೆಡ್ಡಿ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ನಿತಿನ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ದೈಹಿಕ ನಿರ್ದೇಶಕ ಹರೀಶ್ ಶಿಕ್ಷಕ ಶಿಕ್ಷಕೇತರ ವೃಂದದವರು ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಸಹಕರಿಸಿದರು.