ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ: ಸ್ನೇಹಿತನ ಗೃಹ ಪ್ರವೇಶಕ್ಕೆ ಆಗಮಿಸಿದ ಮಾಜಿ ಡಿಸಿಎಂ ಅಶ್ವತ್ ನಾರಾಯಣ ದಂಪತಿ
18/02/2025, 19:49

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸಮೀಪದ ಅತ್ತಿಗೆರೆ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವಥ್ ನಾರಾಯಣ ಅವರನ್ನು ಅಭಿನಂದಿಸಲಾಯಿತು.
ಸೋಮವಾರ ಅತ್ತಿಗೆರೆ ಗ್ರಾಮದ ತಮ್ಮ ಬಂಧು ಮತ್ತು ಸ್ನೇಹಿತರಾದ ಚೇತನ್ ಅತ್ತಿಗೆರೆ ಅವರ ಮನೆಯ ಗೃಹಪ್ರವೇಶಕ್ಕೆ ಡಾ. ಅಶ್ವಥ್ ನಾರಾಯಣ ಅವರು ಪತ್ನಿ ಶೃತಿ ಅವರೊಂದಿಗೆ ಆಗಮಿಸಿ ಶುಭ ಹಾರೈಸಿದರು.
ಚೇತನ್ ಅವರು ಬೆಂಗಳೂರಿನಲ್ಲಿ ಯುವ ಉದ್ಯಮಿಯಾಗಿದ್ದು, ಈ ಹಿಂದೆ ಡಾ. ಅಶ್ವಥ ನಾರಾಯಣ ಅವರ ಮಾರ್ಗದರ್ಶನದಲ್ಲಿ ಅವರ ಮಾಲೀಕತ್ವದ ಕಂಪನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಗೃಹ ಪ್ರವೇಶಕ್ಕೆ ಆಗಮಿಸಿದ್ದ ಡಾ. ಅಶ್ವಥ್ ನಾರಾಯಣ ಮತ್ತು ಪತ್ನಿ ಶೃತಿ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮುಖಂಡರಾದ ದೀಪಕ್ ದೊಡ್ಡಯ್ಯ, ಬಿ.ಎನ್. ಜಯಂತ್, ಜೆ.ಎಸ್.ರಘು, ಸುಂದ್ರೇಶ್ ಕೊಣಗೆರೆ, ಸುರೇಂದ್ರ ಕೊಣಗೆರೆ, ಸಂಜಯ್ ಕೊಟ್ಟಿಗೆಹಾರ, ನಾಗೇಶ್ ಅತ್ತಿಗೆರೆ, ಚೇತನ್ ಅತ್ತಿಗೆರೆ ಅವರ ಕುಟುಂಬದವರು ಉಪಸ್ಥಿತರಿದ್ದರು.