ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ ತೋಟದಲ್ಲಿ ಗಾಂಜಾ ಗಿಡ: ಆರೋಪಿಯ ಬಂಧನ
16/12/2022, 20:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಕೊಟ್ಟಿಗೆಹಾರ ತೋಟದಲ್ಲಿ ಗಾಂಜಾ ಗಿಡ ಬೆಳೆದ ಆರೋಪಿಯನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
ಹಂಡುಗುಳಿ ಗ್ರಾಮದ ತೋಟದಲ್ಲಿ ಗಾಂಜಾ ಗಿಡ ಬೆಳೆದ ಮತ್ತು ಮಾರಾಟದ ಉದ್ದೇಶದಿಂದ ಸೌದೆ ಕೊಟ್ಟಿಗೆಯಲ್ಲಿ ಗಾಂಜಾ ದಾಸ್ತಾನು ಮಾಡಿದ್ದ ಆರೋಪಿ ಹೆಚ್. ಎ. ಸುರೇಶ್ ಎಂಬುವವರನ್ನು ಅಬಕಾರಿ ಪೊಲೀಸರು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಅಪೂರ್ವ ಎ.ಆರ್, ಮೂಡಿಗೆರೆ ಎಸಿಎಫ್ ರಾಜೇಶ್ ನಾಯಕ್,ಅಬಕಾರಿ ಪೇದೆ ರಮೇಶ ತುಳಜನ್ನವರ, ತೀರ್ಥೇಶ್ ಬಿ.ಕೆ, ವಾಹನ ಚಾಲಕ ಸತೀಶ್ ಕುಮಾರ್ ಇದ್ದರು.